ಹಲ್ಲೆ ಪ್ರಕರಣ : ಮಾಜಿ ಶಾಸಕ ರವಿಕಾಂತ ಪಾಟೀಲ್ ಸೇರಿ ನಾಲ್ವರ ಬಂಧನ

Ravikanta-Patil--01

ವಿಜಯಪುರ,ಜು.14-ಮಹಾರಾಷ್ಟ್ರ ಮೂಲದ ಮರಳು ಗುತ್ತಿಗೆದಾರರೊಬ್ಬರ ಮೇಲೆ ಮರಣಾಂತಿಕ ಹಲ್ಲೆ ನಡೆಸಿ ಅವರಿಂದ ನಗನಾಣ್ಯ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ್ ಮತ್ತು ಅವರ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.  ಹಲ್ಲೆಗೊಳಗಾದ ಕಾಮೇಶ್ ಪಾಟೀಲ್ ಹಾಗೂ ಅವರ ಇಬ್ಬರು ಸಂಗಡಿಗರು ತೀವ್ರವಾಗಿ ಗಾಯಗೊಂಡಿದ್ದು , ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಅಣಚಿ ಸೇತುವೆ ಬಳಿ ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ.

ಮಹಾರಾಷ್ಟ್ರದ ಮರಳು ಗುತ್ತಿಗೆದಾರ ಪಿಂಟು ಎಂಬುವರಿಗೂ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಅವರಿಗೂ ಈ ಹಿಂದೆ ಜಗಳವಾಗಿತ್ತು. ಆದರೆ ಕಾಮೇಶ್ ಪಾಟೀಲ್ ಅವರನ್ನು ಪಿಂಟು ಎಂದು ತಿಳಿದು ಮಾಜಿ ಶಾಸಕರು ಈ ಹಲ್ಲೆ ನಡೆಸಿದ್ದಾರೆ. ಕಾಮೇಶ್ ಪಾಟೀಲ್ ಮೂಲತಃ ಇಂಡಿ ತಾಲ್ಲೂಕಿನ ರೇವತಗಾಂವ್ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಮಗ.
ಹಲ್ಲೆ ಸಂದರ್ಭ ತಮ್ಮ ಬಳಿ ಇದ್ದ ಮೊಬೈಲ್, ಚಿನ್ನಾಭರಣ ಮತ್ತು ನಗದು ಕಿತ್ತುಕೊಂಡು ಹಲ್ಲೆಕೋರರು ಪರಾರಿಯಾದರು ಎಂದು ಕಾಂತೇಶ್ ಪಾಟೀಲ್ ಪೆÇಲೀಸರಿಗೆ ತಿಳಿಸಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ರವಿಕಾಂತ್ ಪಾಟೀಲ್ ಮತ್ತು ಇತರ ಮೂವರನ್ನು ಬಂಧಿಸಿದ ಇಂಡಿ ಪೊಲೀಸರು ಅವರನ್ನು ನ್ಯಾಯಾಧೀಶರೆದುರು ಹಾಜರುಪಡಿಸಿದ್ದು , ಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಈ ಘಟನೆ ಬೆಳಗಿನ ಜಾವ 3.30ಕ್ಕೆ ನಡೆದಿದ್ದು ರವಿಕಾಂತ್ ಪಾಟೀಲ್ ಮತ್ತು ಸಂಗಡಿಗರನ್ನು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin