ಎನಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಯೋಧರು

ಈ ಸುದ್ದಿಯನ್ನು ಶೇರ್ ಮಾಡಿ

Encounter

ಶ್ರೀನಗರ, ಜು. 15- ಗಡಿ ನಿಯಂತ್ರಣ ರೇಖೆ ಬಳಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ(ಬಿಒಎಸ್‍ಎಫ್) ಯೋಧರು ಮತ್ತು ಪಾಕ್ ಬೆಂಬಲಿತ ಉಗ್ರರ ನಡುವೆ ಇಂದು ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಬಲಿಯಾಗಿದ್ದಾರೆ. ಇನ್ನೂ ಕೂಡ ಉಗ್ರರೊಂದಿಗಿನ ಗುಂಡಿನ ಚಕಮಕಿ ಮುಂದುವರಿದಿದ್ದು, ಮೃತ ಉಗ್ರರ ದೇಹಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಮಧ್ಯರಾತ್ರಿ ಅನುಮಾನಾಸ್ಪದವಾಗಿ ಕೆಲವರು ಸಂಚರಿಸುತ್ತಿರುವರೆಂಬ ಸಂಶಯದಿಂದ ಬಿಎಸ್‍ಎಫ್ ಪಡೆ ಮತ್ತು ಪೊಲೀಸರು ಜಂಟಿಯಾಗಿ ಶೋಧಕಾರ್ಯಕ್ಕೆ ಮುಂದಾದರು. ಈ ಸಂದರ್ಭ ಆಕಡೆಯಿಂದ ಗುಂಡುಗಳು ಹಾರಿ ಬಂದವು. ಈ ವೇಳೆ ಭದ್ರತಾ ಪಡೆಗಳೂ ಅತ್ತ ಗುಂಡು ಹಾರಿಸಿದವು. ಬರಬರುತ್ತಾ ಗುಂಡಿನ ಕಾಳಗ ತೀವ್ರ ಸ್ವರೂಪ ಪಡೆದುಕೊಂಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ಥಾನ ಬೆಂಬಲಿತ ಉಗ್ರರು ಅಪ್ರಚೋದಿತವಾಗಿ ನಡೆಸಿದ ದಾಳಿಗೆ ಭಾರತೀಯ ಪಡೆಗಳು ದಿಟ್ಟ ಉತ್ತರ ನೀಡಿದವು ಬೆಳಗಿನ ವೇಳೆಗೆ ಇಬ್ಬರು ಉಗ್ರರು ಹತರಾಗಿ ಉಳಿದವರು ದಾಳಿ ಮುಂದುವರಿಸಿದ್ದಾರೆ. ಭಯೋತ್ಪಾದಕರು ಎಷ್ಟು ಜನರಿದ್ದಾರೆ ಎಂಬುದು ಖಚಿತವಾಗಿಲ್ಲ. ಶೋಧ ಕಾರ್ಯ ಮುಂದುವರಿದಿದದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಗಡಿಯಲ್ಲಿ ಉಗ್ರರ ಪುಂಡಾಟಿಕೆ ಹೆಚ್ಚುತ್ತಿದೆ. ನಿನ್ನೆಯಷ್ಟೇ ಗಡಿಯೊಳಕ್ಕೆ ನುಗ್ಗಲು ಯತ್ನಿಸಿದ ಉಗ್ರರನ್ನು ಭದ್ರತಾ ಪಡೆ ಯೋಧರು ಹತ್ಯೆ ಮಾಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin