ಓವರಟೇಕ್ ತಂದಿಟ್ಟ ಆಪತ್ತು : ಭೀಕರ ಅಪಘಾತದಲ್ಲಿ 10 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

BUs-Accidnet-v

ಚೆನ್ನೈ, ಜು. 15- ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯನ್ನು ಓವರಟೇಕ್ ಮಾಡಲು ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಪ್ರಯತ್ನಿಸಿದಾಗ ಸಂಭವಿಸಿದ ಭಿಕರ ಅಪಘಾತದಲ್ಲಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಂಜಾವೂರ ಜಿಲ್ಲೆಯಲ್ಲಿ ಸೇತುವೆಯೊಂದರ ಮೇಲೆ ಹೋಗುತ್ತಿದ್ದಾಗ ಬಸ್ ಚಾಲಕ ಲಾರಿ ಓವರಟೇಕ್ ಮಾಡಲು ಪ್ರಯತ್ನಿಸಿದ್ದಾನೆ. ಆಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಬ್ಬಿಣ ತುಂಬಿದ್ದ ಲಾರಿಗೆ ಅಪ್ಪಳಿಸಿದೆ.

ಈ ವೇಳೆ ಬಸ್ ನಲ್ಲಿದ್ದ ಕೆಲವರು ಪ್ರಯಾಣಿಕರ ದೇಹಗಳಲ್ಲಿ ಕಬ್ಬಿಣದ ರಾಡ್‍ಗಳು ತೂರಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸಿ ಮತ್ತು ಲಾರಿಗಳ ಇಬ್ಬರು ಚಾಲಕರೂ ಮೃತಪಟ್ಟಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನೆಲ್ಲಾ ತಾಂಜಾವೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin