ಕಾರಾಗೃಹದಲ್ಲಿಯೇ ಮೃತಪಟ್ಟ ನೋಬೆಲ್ ಪುರಸ್ಕೃತ ಲಿಯು ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Liu-Xiaobo

ಬೀಜಿಂಗ್, ಜು. 15- ಮಾರಕ ಕ್ಯಾನ್ಸರ್ ಕಾಯಿಲೆ ಉಲ್ಬಣಗೊಂಡು ನಿನ್ನೆ ಕಾರಾಗೃಹದಲ್ಲಿಯೇ ಇಹಲೋಕ ತ್ಯಜಿಸಿದ ನೋಬಲ್ ಪ್ರಶಸ್ತಿ ಪುರಸ್ಕøತ ಲಿಯು ಜಿಯವೋಬೊ ಅವರ ಪರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ನಡೆಯಿತು. ಕಾರಗೃಹದಲ್ಲಿದ್ದ ಮಾನವ ಹಕ್ಕುಗಳ ಕಾರ್ಯಕರ್ತ 61 ವರ್ಷದ ಲಿಯು ಕಳೆದ ಕೆಲವು ವರ್ಷಗಳಿಂದ ಲಿವರ್ ಕ್ಯಾನ್ಸರ್ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು.

ಷೆನ್‍ಯಂಗ್ ನಗರದಲ್ಲಿ ಲಿಯು ಅವರ ಕುಂಟುಂಬದ ಸದಸ್ಯರು, ಸ್ನೇಹಿತರು, ಬಂಧು-ಬಳಗದವರು ಪಾಲ್ಗೊಂಡಿದ್ದರು. ಲಿಯು ಅವರ ಇಚ್ಚೆಯಂತೆ ಅವರ ಹುಟ್ಟೂರಲ್ಲೇ ಚೀನಾ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಸರ್ಕಾರಿ ಸ್ವಾಮ್ಯದ ಜಿನ್ಹುವಾ ಪ್ರತಿಕೆ ವರದಿ ಮಾಡಿದೆ. ಅಂತ್ಯ ಸಂಸ್ಕಾರದ ವೇಳೆ ಲಿಯು ಪತ್ನಿ, ಪುತ್ರರು, ಗೆಳೆಯರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin