ಚೀನಾ-ಭಾರತ ಗಡಿ ಸಮಸ್ಯೆ : ಮೋದಿ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ ಗೌಡರು

Devegowda-02

ನವದೆಹಲಿ,ಜು.15-ಚೀನಾ-ಭಾರತ ಗಡಿ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಇಂದು ದೆಹಲಿಗೆ ತೆರಳಿದರು.   ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಎಚ್.ಡಿ.ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಆರೋಗ್ಯ ಹೇಗಿದೆ. ದೆಹಲಿಗೆ ಬರಬಹುದೇ? ಚೀನಾ-ಭಾರತ ಗಡಿ ಸಮಸ್ಯೆ ಬಗ್ಗೆ ನಿಮ್ಮ ಸಲಹೆ ಬೇಕು ಎಂದು ಕನ್ನಡದಲ್ಲಿಯೇ ಕೇಳಿದ್ದಾರೆ.

ಈ ಆಹ್ವಾನವನ್ನು ಸ್ವೀಕರಿಸಿರುವ ದೇವೇಗೌಡರು ಇಂದು ನಡೆಯುತ್ತಿದ್ದ ಸಭೆಯನ್ನು ಬಿಟ್ಟು ಹಳೆ ಮೈಸೂರು ಭಾಗದ ಅಭ್ಯರ್ಥಿಗಳ ಆಯ್ಕೆಯ ಹೊಣೆಯನ್ನು ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಹಿಸಿ ದೆಹಲಿಗೆ ಹೊರಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin