ಜು. 17ರಂದು ಚುನಾವಣೆ, ಯಾರಾಗಲಿದ್ದಾರೆ ದೇಶದ ಮೊದಲ ಪ್ರಜೆ..?

Kovind-Vs-Meera

ನವದೆಹಲಿ, ಜು. 15- ದೇಶದ ಅತ್ಯುನ್ನತ ಹುದ್ದೆಗೆ ನೂತನ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಜುಲೈ 17ರಂದು(ಸೋಮವಾರ) ರಾಜಧಾನಿ ದೆಹಲಿ ಸೇರಿದಂತೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಹೊಸ ಅಧ್ಯಕ್ಷರನ್ನು ಚುನಾಯಿಸಲು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‍ಡಿಎ ಅಭ್ಯರ್ಥಿಯಾಗಿ ಬಿಹಾರದ ರಾಜ್ಯಪಾಲರಾಗಿದ್ದ ಕಾನೂನು ಪಂಡಿತರೂ ಆಗಿರುವ ರಾಮನಾಥ್ ಕೋವಿಂದ್ ಅವರು ಕಣಕ್ಕಿಳಿದಿದ್ದರೆ ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿಕೂಟದ ಅಭ್ಯರ್ಥಿಯಾಗಿ ಯುಪಿಎ ಸರ್ಕಾರದ ಎರಡು ಅವಧಿಯ ಆಡಳಿತದಲ್ಲಿ ಲೋಕಸಭಾಧ್ಯಕ್ಷರಾಗಿ ಸದನದಲ್ಲಿ ಘಟಾನುಘಟಿ ಸದಸ್ಯರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಹೆಸರು ಮಾಡಿರುವ ಮತ್ತು ದೇಶದ ಅಗ್ರಗಣ್ಯ ದಲಿತ ನಾಯಕ ಬಾಬೂ ಜಗಜೀವನರಾಮ್ ಅವರ ಮಗಳು ಮೀರಾ ಕುಮಾರ್ ಕಣಕ್ಕಿಳಿದಿದ್ದಾರೆ.

ಎನ್‍ಡಿಎ ಅಭ್ಯರ್ಥಿಯ ಗೆಲುವಿಗೆ ಅಗತ್ಯವಾಗಿರುವುದಕ್ಕಿಂತಲೂ ಹೆಚ್ಚು (ಶೇ. 60ರಷ್ಟು)ಮತಗಳಿರುವುದು ಗೊತ್ತಿದ್ದೂ ಸೈದ್ಧಾಂತಿಕ ಹೋರಾಟದ ಹಿನ್ನೆಲೆಯಲ್ಲಿ ತಾವು ಸ್ಪರ್ಧಿಸುತ್ತಿರುವುದಾಗಿ ಮೀರಾ ಕುಮಾರ್ ಈಗಾಗಲೇ ಹೇಳಿದ್ದಾರೆ.  ಇಬ್ಬರೂ ಅಭ್ಯರ್ಥಿಗಳೂ ಬಹುತೇಕ ಎಲ್ಲಾ ರಾಜ್ಯಗಳಿಗೆ ಈಗಾಗಲೇ ಭೇಟಿ ನೀಡಿ ಜನಪ್ರತಿನಿಧಿಗಳ ಮತ ಯಾಚಿಸಿದ್ದಾರೆ. ರಾಮನಾಥ್ ಕೋವಿಂದ್ ಅವರು ಇಂದು ಮಹರಷ್ಟ್ರಕ್ಕೆ ತೆರಳಿ ಮತ ಯಾಚನೆ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin