ಪರಪ್ಪನ ಅಗ್ರಹಾರಕ್ಕೆ ಡಿಜಿಪಿ ಸತ್ಯನಾರಾಯಣ್‍ರಾವ್ ಭೇಟಿ

DGP-Satyanarayana-Roa--01

ಬೆಂಗಳೂರು, ಜು.15- ಡಿಜಿಪಿ ಸತ್ಯನಾರಾಯಣ್‍ರಾವ್ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಜೈಲಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆರೋಪ ಕೇಳಿಬಂದ ಮೇಲೆ ಪ್ರಥಮ ಭೇಟಿ ಇದಾಗಿದೆ.  ಜೈಲಿನಲ್ಲಿರುವ ಎಐಎಡಿಎಂಕೆ ಮುಖಂಡೆ ಶಶಿಕಲಾ ಮತ್ತು ಕರೀಂಲಾಲ್ ತೆಲಗಿ ಅವರಿಗೆ ರಾಜಾಥಿತ್ಯ ನೀಡಲಾಗುತ್ತಿದೆ. ಕಾರಾಗೃಹದಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿದ್ದು, ತನಿಖಾಧಿಕಾರಿಗಳು ಭೇಟಿ ನೀಡುವ ಮುನ್ನವೇ ಸತ್ಯನಾರಾಯಣ್‍ರಾವ್ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ, ಅವ್ಯವಹಾರ ನಡೆದಿದೆ ಎಂದು ಡಿಐಜಿ ಡಿ.ರೂಪಾ ಅವರು ವರದಿ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin