ಭೂ ಪರಿವರ್ತನೆಗೆ ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ACB

ಮೈಸೂರು,ಜು.15-ಜಮೀನಿನ ಭೂ ಪರಿವರ್ತನೆಗಾಗಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗನನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ.  ತಾಲ್ಲೂಕಿನ ಕಸಬಾ ಹೋಬಳಿಯ ಸಿದ್ದಲಿಂಗಾಪುರ ವೃತ್ತದ ಗ್ರಾಮ ಲೆಕ್ಕಿಗ ಎಂ.ನಾಗೇಶ್‍ಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬೈರಾಪುರ ಗ್ರಾಮದವರಾದ ಸಮಾಜ ಸೇವಕರೊಬ್ಬರು ಮೈಸೂರಿನ ಕಸಬಾ ಹೋಬಳಿಯ ಕೆಸರೆ ಗ್ರಾಮದಲ್ಲಿ ಜಮೀನು ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಗ್ರಾಮ ಲೆಕ್ಕಿಗ ಭೂ ಪರಿವರ್ತನೆ ಮಾಡಿಕೊಡಲು 55 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದ.

ಅಂದಂತೆ ಮುಂಗಡವಾಗಿ 40 ಸಾವಿರ ರೂ. ಕೊಡುವುದಾಗಿ ಒಪ್ಪಿಕೊಂಡು ನಂತರ ಎಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು.
ಗ್ರಾಮ ಲೆಕ್ಕಿಗ ನಾಗೇಶ್‍ಕುಮಾರ್ ಇಂದು ಬೆಳಗ್ಗೆ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin