ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ನಿಷೇಧ, ಸುಪ್ರೀಂ ಕೋರ್ಟ್ ಮೊರೆಹೋದ ಟ್ರಂಪ್

Trump--01

ವಾಷಿಂಗ್ಟನ್, ಜು. 15- ಆರು ಇಸ್ಲಾಮಿಕ್ ರಾಷ್ಟ್ರಗಳಿಗೆ ವಿಧಿಸಲಾಗಿದ್ದ ವೀಸಾ(ಪ್ರಯಾಣ) ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಫೆಡರಲ್ ನ್ಯಾಯಾಲಯ ನೀಡಿದ್ದ ಆದೇಶವು ಸರ್ಕಾರದ ಉದ್ದೇಶವನ್ನು ದುರ್ಬಲಗೊಳಿಸಲಿದ್ದು ಅದಕ್ಕೆ ತಡೆ ನೀಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇದೀಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದೆ.

ನಿಷೇಧಕ್ಕೊಳಗಾಗಿರುವ ಈ ಆರು ಇಸ್ಲಾಮಿಕ್ ರಾಷ್ಟ್ರಗಳ ಪ್ರಜೆಗಳು ಈಗಾಗಲೇ ಇಲ್ಲಿ ನೆಲೆಸಿದ್ದು ಅವರ ಸಂಬಂಧಿಕರು ಅಮೆರಿಕಕ್ಕೆ ಬಂದುಹೋಗಲು ಅವಕಾಶವಿರಬೇಕೆಂಬ ಅರ್ಥ ಬರುವಂತೆ ಕಳೆದ ವಾರ ಫೆಡರಲ್ ಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪಿನಿಂದ ಸರ್ಕಾರದ ಕಟ್ಟುನಿಟ್ಟಿನ ಆದೇಶಕ್ಕೆ ಚ್ಯುತಿ ಉಂಟಾಗುತ್ತದೆ. ಅದಕ್ಕೆ ತಡೆ ಒಡ್ಡ ಬೇಕು ಎಂದು ಟ್ರಂಪ್ ಆಡಳಿತ ನಿನ್ನೆ ಸಂಜೆ ಸವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin