ವಿದ್ಯಾರ್ಥಿನಿಯನ್ನು ವಂಚಿಸಿ ಕಾಮತೃಷೆಗೆ ಬಳಸಿಕೊಂಡ ಉಪನ್ಯಾಸಕ

ಈ ಸುದ್ದಿಯನ್ನು ಶೇರ್ ಮಾಡಿ

Rape

ಕೊಪ್ಪಳ, ಜು.15-ವರ್ಣಮಾತ್ರಂ ಕಲಿಸಿದಾತಂ ಗುರು ಎಂಬ ಮಾತಿದೆ. ಗುರುಗಳು ಮತ್ತು ವಿದ್ಯಾರ್ಥಿಗಳ ಸಂಬಂಧ ಅತ್ಯಂತ ಪವಿತ್ರವಾದುದು. ಆದರೆ ಇಲ್ಲೊಬ್ಬ ಉಪನ್ಯಾಸಕ ಗುರುವಿಗೆ ಕಳಂಕ ತರುವ ರೀತಿ ಕೆಲಸ ಮಾಡಿ ಪರಾರಿಯಾಗಿದ್ದಾನೆ. ತಾನು ಪಾಠ ಮಾಡಿದ ವಿದ್ಯಾರ್ಥಿನಿಯನ್ನೇ ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟು ಓಡಿಹೋಗಿದ್ದಾನೆ. ವಿದ್ಯಾರ್ಥಿನಿಯಿಂದ ಎಲ್ಲಾ ರೀತಿಯ ಆತಿಥ್ಯ ಪಡೆದ ಈ ಅತಿಥಿ ಉಪನ್ಯಾಸಕ ಈಗ ಗಯಬ್ ಆಗಿದ್ದಾನೆ. ಇದರಿಂದಾಗಿ ಮೋಸ ಹೋಗಿರುವ ವಿದ್ಯಾರ್ಥಿನಿ ಉಪನ್ಯಾಸಕನಿಗೆ ಪೊಲೀಸ ರಿಂದ ಆತಿಥ್ಯ ಕೊಡಿಸಲು ದೂರು ದಾಖಲಿಸಿದ್ದಾಳೆ.

ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ನಿವಾಸಿಯಾಗಿರುವ ಬಾಳಪ್ಪ ಹಡಪದ ಎಂಬಾತ ಕಳೆದ ವರ್ಷ ಕೊಪ್ಪಳ ನಗರ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಬಾಳಪ್ಪನೇ ತನ್ನ ವಿದ್ಯಾರ್ಥಿನಿಯನ್ನು ನಂಬಿಸಿ ಮೋಸ ಮಾಡಿದಾತ.  ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಗ್ರಾಮದಿಂದ ವಿದ್ಯಾರ್ಥಿನಿಯೋರ್ವಳು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರಥಮ ಪಿಯುಸಿಯಿಂದಲೇ ಉಪನ್ಯಾಸಕ ಬಾಳಪ್ಪ ಹಡಪದ ಈ ಬಾಲಕಿಯೊಂದಿಗೆ ಸರಸ, ಸಲ್ಲಾಪವಾಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಆದರೆ ಈಗ ಉಪನ್ಯಾಸಕ ಬಾಳಪ್ಪ ಬೇರೊಂದು ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಇದರಿಂದಾಗಿ ನೊಂದ ಯುವತಿ ಈತನ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಪೊಲೀಸರೆದುರು ಮದುವೆಯಾಗುವುದಾಗಿ ಹೇಳಿ ಹೋಗಿದ್ದ ಉಪನ್ಯಾಸಕ ಬಾಳಪ್ಪ ಬಳಿಕ ಸ್ವಿಚ್‍ಆಫ್ ಮಾಡಿದ್ದಾನೆ. ನ್ಯಾಯಕ್ಕಾಗಿ ಯುವತಿ ನಗರ ಠಾಣೆ ಮೆಟ್ಟಿಲೇರಿದ್ದಾಳೆ. ಈತನ ವಿರುದ್ಧ ಕಾನೂನು ಕ್ರಮಕೈಗೊಂಡು ನನಗೆ ನ್ಯಾಯ ಕೊಡಿಸಬೇಕೆಂದು ಯುವತಿ ಅಂಗಲಾಚುತ್ತಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin