ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಮನಸೋ ಇಚ್ಛೆ ಥಳಿಸಿದರು (Video)

ಈ ಸುದ್ದಿಯನ್ನು ಶೇರ್ ಮಾಡಿ

Women--01

ಪಾಟಿಯಾಲ,ಜು.15-ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಮನೆಯವರೇ ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್‍ನ ಪಾಟಿಯಾಲದಲ್ಲಿ ನಡೆದಿದೆ.  ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬುವರು ಹಲ್ಲೆಗೊಳಗಾದ ಮಹಿಳೆಯಾಗಿದ್ದು , ಹಲವು ವರ್ಷಗಳ ಹಿಂದೆ ದಲ್ಜೀತ್ ಸಿಂಗ್ ಎಂಬುವರನ್ನು ವಿವಾಹವಾಗಿದ್ದು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೆಣ್ಣು ಮಗು ಜನಿಸಿರುವುದು ಮನೆಯವರಿಗೆ ಇಷ್ಟ ಇಲ್ಲದಿರುವುದರಿಂದ ವರದಕ್ಷಿಣೆ ನೆಪವೊಡ್ಡಿ ಮೀನಾ ಕಶ್ಯಪ್ ಅವರನ್ನು ಮನಸೋ ಇಚ್ಛೆ ಥಳಿಸಿದ್ದರು. ಹೆಣ್ಣು ಮಗು ಜನಿಸಿದ ಬಳಿಕ ಆಕೆಯನ್ನು ಮನೆಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಆಕೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಆದಾಗ್ಯೂ ಆಕೆಯನ್ನು ಬಿಡದ ಆಕೆಯ ಗಂಡನ ಸಹೋದರರು ವರದಕ್ಷಿಣೆಗಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯೂ ಕೂಡ ಏಕಾಏಕಿ ಮೀನಾ ಅವರ ನಿವಾಸಕ್ಕೆ ಆಗಮಿಸಿದ ಆತನ ಮೈದುನ, ಆತನ ಸಹಚರರು ದೊಣ್ಣೆಯಿಂದ ಥಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ಕೇಳಿಬರುತ್ತಿದ್ದಂತೆ ಪೊಲೀಸರು ದೂರು ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin