ಟೆಸ್ಟ್ ಡ್ರೈವ್ ಮಾಡದೆ ಡಿಎಲ್ ಪಡೆಯುತ್ತಿದ್ದಾರೆ 10ರಲ್ಲಿ 6 ಮಂದಿ..!

Test-Drive--01

ನವದೆಹಲಿ, ಜು. 16- ವಾಹನ ಸವಾರರ ಜೀವರಕ್ಷಣೆಯ ದೃಷ್ಟಿಯಿಂದ ಚಾಲಕರು ಚಾಲನಾ ಪರವಾನಗಿ ಪಡೆಯುವಾಗ ಕಡ್ಡಾಯವಾಗಿ ಟೆಸ್ಟ್ ಡ್ರೈವ್ ಅನ್ನು ಎದುರಿಸಬೇಕಾಗುತ್ತದೆ. ಆದರೆ ಸಮೀಕ್ಷೆಯ ಪ್ರಕಾರ ದೇಶದಲ್ಲಿ 10 ಮಂದಿ ಡ್ರೈವಿಂಗ್ ಪಡೆಯುವರ ಪೈಕಿ 6 ಮಂದಿಗೆ ಪರೀಕ್ಷೆಗೊಳಗಾಗದೆ ಲೈಸೆನ್ಸ್ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಇತ್ತೀಚೆಗೆ ಲೋಕಸಭಾದಲ್ಲಿ ಚರ್ಚೆಗೊಂಡ ಮೋಟಾರು ವಾಹನಗಳ ನಿಯಮಗಳ ಅನುಸಾರ ದೇಶದಲ್ಲಿ ಹೆಚ್ಚು ವಾಹನಗಳ ದಟ್ಟಣೆಯಿರುವ 5 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದಾಗ 6 ಮಂದಿ ಚಾಲನೆ ಪರೀಕ್ಷೆ ಇಲ್ಲದೆ ಚಾಲನಾ ಪರವಾನಗಿ (ಡಿಎಲ್) ಪಡೆದಿರುವುದು ಗೊತ್ತಾಗಿದೆ.

ಇದರ ಪ್ರಕಾರ ಆಗ್ರಾವೊಂದರಲ್ಲೇ ಶೇ. 88 ಮಂದಿ ಪರೀಕ್ಷೆಗೊಳಗಾಗದೆ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ, ಜೈಪುರದಲ್ಲಿ ಶೇ.72, ಗೋವಾತಿಯಲ್ಲಿ ಶೇ.64, ದೇಶದ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈಗಳಲ್ಲಿ ಶೇ.54 ಮಂದಿ ಚಾಲನಾ ಪರವಾನಗಿಯನ್ನು ಅಡ್ಡದಾರಿಯಿಂದ ಪಡೆದಿರುವುದು ಬೆಳಕಿಗೆ ಬಂದಿದೆ.

ರಸ್ತೆ ಸುರಕ್ಷತಾ ವಕಾಲತ್ತು ಪ್ರತಿಷ್ಠಾನ ಈ ಸಮೀಕ್ಷೆ ನಡೆದಿದ್ದು ಚಾಲನಾ ಪರವಾನಗಿ ನೀಡುವ ಆರ್‍ಟಿಒ ಕಚೇರಿಗಳಲ್ಲಿ ಭ್ರಷ್ಟತೆ ತುಂಬಿಕೊಂಡಿರುವುದರಿಂದಲೇ ಶೇ. 59 ಚಾಲಕರು ಸರ್ಕಾರ ಹೊರಡಿಸಿರುವ ಯಾವುದೇ ನಿಯಮಗಳನ್ನು ಅನುಸರಿಸದೆ ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ
ದೇಶದಲ್ಲಿ ಒಟ್ಟು 997 ಆರ್‍ಟಿಒ ಕಚೇರಿಗಳಿದ್ದು ವರ್ಷವೊಂದಕ್ಕೆ 1.15 ಕೋಟಿ ಚಾಲಕರು ಚಾಲನಾ ಪರವಾನಗಿಯನ್ನು ಪಡೆಯುತ್ತಿದ್ದಾರೆ. ಮೇಲ್ನೋಟಕ್ಕೆ ಇದರ ಅನ್ವಯ ಪ್ರಕಾರ 40 ಡ್ರೈವಿಂಗ್ ಲೈಸೆನ್ಸ್‍ಗಳು ಸರಿಯಾದ ರೀತಿಯಲ್ಲಿ ವಿತರಣೆಯಾದರೆ 130 ಚಾಲನಾ ಪರವಾನಗಿಯನ್ನು ಸರ್ಕಾರದ ನಿಯಮದ ವಿರುದ್ಧ ವಿತರಿಸಲಾಗಿದೆ.

2014ರಲ್ಲಿ ಸುಪ್ರೀಂಕೋರ್ಟ್ ಹೊರಡಿಸಿದ ನಿಯಮದ ಪ್ರಕಾರ ಒಂದು ಆರ್‍ಟಿಒ ಕಚೇರಿಯು ದಿನವೊಂದಕ್ಕೆ 15-20 ಚಾಲಕರಿಗೆ ಮಾತ್ರ ಪರವಾನಗಿ ನೀಡಬೇಕೆಂಬ ನಿಯಮವನ್ನು ಜಾರಿಗೊಳಿಸಿದ್ದರೂ ಕೂಡ ಪ್ರತಿದಿನ ಕೆಲ ಆರ್‍ಟಿಒ ಕಚೇರಿಗಳಲ್ಲಿ 130-150 ಲೈಸೆನ್ಸ್‍ಗಳನ್ನು ವಿತರಣೆ ಮಾಡಲಾಗುತ್ತಿರುವುದನ್ನು ಗಮನಿಸಿದರೆ ಇಲ್ಲಿ ಯಾವುದೇ ಪರೀಕ್ಷೆ ನಡೆಸದೆ ಚಾಲನಾ ಪರವಾನಗಿಯನ್ನು ವಿತರಿಸಿರುವ ಅಂಶ ಗೋಚರಿಸುತ್ತದೆ.

ಸಂಸದರಿಗೂ ಡ್ರೈವಿಂಗ್ ಟೆಸ್ಟ್:
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೊರಡಿಸಿರುವ ಆದೇಶದಂತೆ ಚಾಲನಾ ಪರವಾನಗಿ ಪಡೆಯಬೇಕಾದರೆ ಜನಸಾಮಾನ್ಯ ಮಾತ್ರವಲ್ಲ , ಶಾಸಕರು, ಸಚಿವರು, ಸಂಸದರು ಕೂಡ ಚಾಲನಾ ಪರೀಕ್ಷೆಯನ್ನು ಎದುರಿಸಿಯೇ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾಗಿದೆ.

ಚಾಲನಾ ತರಬೇತಿಯಲ್ಲೂ ಲೋಪ:

ಇನ್ನು ಚಾಲನಾ ತರಬೇತಿ ನೀಡುವ ಕೇಂದ್ರಗಳು ಕೂಡ ಚಾಲಕನಿಗೆ ತರಬೇತಿ ನೀಡುವ ವೇಳೆ ರಸ್ತೆ ಸುರಕ್ಷತೆಯ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು ಕೂಡ ದುರಂತಕ್ಕೆ ಕಾರಣವಾಗಿದೆ. ಇದರ ಅನ್ವಯ ಶೇ. 82ರಷ್ಟು ರಸ್ತೆಗಳಲ್ಲಿ 3 ಸೆಕೆಂಡ್‍ಗಳ ನಿಯಮವನ್ನು ಕೂಡ ಗಾಳಿಗೆ ತೂರಿದ್ದರೆ, ಕೊಚ್ಚಿಯ ರಸಕ್ತೆಗಳಲ್ಲಿ ವಾಹನ ಚಾಲಕರು ಶೇ.90ರಷ್ಟು ಈ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಕೂಡ ಸಮೀಕ್ಷೆ ತಿಳಿಸಿದೆ. ಆರ್‍ಟಿಒ ಅಧಿಕಾರಿಗಳ ಇಂತಹ ಬೇಜವಾಬ್ದಾರಿತನದಿಂದಲೇ ರಸ್ತೆ ಅಪಘಾತಗಳು ಹೆಚ್ಚಾಗಿ ನೂರಾರು ಪ್ರಯಾಣಿಕರ ಸಾವಿಗೆ ಕಾರಣವಾಗುತ್ತಿರುವುದು ವಿಷಾದನೀಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin