ಡಿಐಜಿ ರೂಪಾ ಪರವಾಗಿದ್ದ ಖೈದಿಗಳು ಬಳ್ಳಾರಿಗೆ ಸ್ಥಳಾಂತರ

Roopa-D

ಬೆಂಗಳೂರು, ಜು.16-ಬಂಧಿಖಾನೆ ಇಲಾಖೆಯ ಡಿಐಜಿ ರೂಪಾ ಅವರ ಪರವಾಗಿದ್ದ ಮೂವರು ಖೈದಿಗಳನ್ನು ಬೆಂಗಳೂರಿನಿಂದ ಬಳ್ಳಾರಿಗೆ ಸ್ಥಳಾಂತರಿಸಲಾಗಿದೆ.
ಜೈಲಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಅವ್ಯವಹಾರದ ಬಗ್ಗೆ ಸಜಾ ಖೈದಿಗಳಾದ ರಾಮಮೂರ್ತಿ, ಶ್ರೀನಿವಾಸ್, ಶಿವಶಂಕರ್ ಎಂಬುವರು ರೂಪಾ ಅವರಿಗೆ ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂವರನ್ನು ಇಂದು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಜೈಲಿನ ಒಳಗಿನ ಸಂಘರ್ಷ ಮತ್ತಷ್ಟು ಉದ್ವಿಗ್ನಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin