ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ..!

Netaji-Subhash-Chandra-Bose

ಪ್ಯಾರಿಸ್, ಜು.16-ಸ್ವಾತಂತ್ರ ಸೇನಾನಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಸಾವಿನ ಸುತ್ತ ಈಗಲೂ ಆನುಮಾನದ ಹುತ್ತ ಬೆಳೆಯುತ್ತಿರುವಾಗಲೇ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂದು ಫ್ರೆಂಚ್ ಇತಿಹಾಸಕಾರ ಜೆ.ಬಿ.ಪಿ. ಮೋರ್ ನೀಡಿರುವ ಹೇಳಿಕೆ ಕುತೂಹಲ ಕೆರಳಿಸಿದೆ.
ಎಲ್ಲರೂ ಊಹಿಸಿರುವಂತೆ ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿರಲಿಲ್ಲ. ಅವರು 1947ರಲ್ಲೂ ಜೀವಂತವಾಗಿದ್ದರು. ಈ ವಿಷಯವು 1947ರ ಡಿಸೆಂಬರ್ 11ರ ಫ್ರೆಂಚ್ ಗುಪ್ತ ಸೇವೆ ವರದಿಯಲ್ಲಿದೆ ಎಂದು ಪ್ಯಾರಿಸ್ ಮೂಲದ ಮೋರ್ ತಿಳಿಸಿದ್ದಾರೆ.

ರಹಸ್ಯ ದಾಖಲೆಗಳು ವರದಿ ಮಾಡಿರುವಂತೆ ನೇತಾಜಿ ಇಂಡೋ-ಚೀನಾ ಗಡಿಯಿಂದ ಪರಾರಿಯಾಗಿದ್ದರು. 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಬೋಸ್ ಮೃತಪಟ್ಟಿರಲಿಲ್ಲ. ಬದಲಾಗಿ ಅವರು ಯಾವುದೋ ಅಜ್ಞಾತ ಸ್ಥಳದಲ್ಲಿ ಜೀವಂತವಾಗಿದ್ದರು ಎಂದು ಮೋರ್ ಹೇಳಿಕೊಂಡಿದ್ದಾರೆ.
ನೇತಾಜಿ ಸಾವಿನ ರಹಸ್ಯಕ್ಕೆ ಸೂಕ್ತ ಉತ್ತರ ಪತ್ತೆ ಮಾಡಲು ಭಾರತ ಸರ್ಕಾರವು ಮೂರು ಆಯೋಗಗಳನ್ನು ರಚಿಸಿತ್ತು.

ಇದರಲ್ಲಿ ಶಾ ನವಾಜ್ ಆಯೋಗ ಮತ್ತು ಖೋಸ್ಲಾ ಸಮಿತಿ ವಿಮಾನ ಅಪಘಾತದಲ್ಲಿ ಸುಭಾಷ್ ಬೋಸರು ಮೃತರಾಗಿದ್ದಾರೆ ಎಂದು ತಿಳಿಸಿತ್ತು. ಆದರೆ 1999ರ ಮುಖರ್ಜಿ ಆಯೋಗವು ನೇತಾಜಿ ವಿಮಾನ ದುರಂತದಲ್ಲಿ ಮೃತಪಟ್ಟಿಲ್ಲ ಎಂದು ಹೇಳಿತ್ತು. ಈಗ ಮೋರ್ ಸಹ ಅದೇ ಹೇಳಿಕೆ ನೀಡಿರುವುದರಿಂದ ವೀರ ಸೇನಾನಿಯ ಸಾವಿನ ರಹಸ್ಯ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin