ನೋವಿನಲ್ಲೂ ಐವರಿಗೆ ಜೀವದಾನ ಮಾಡಿದ ಕುಟುಂಬ

ಈ ಸುದ್ದಿಯನ್ನು ಶೇರ್ ಮಾಡಿ

Human--01

ಬೆಂಗಳೂರು, ಜು.16- ಮಗನನ್ನು ಕಳೆದುಕೊಂಡ ದುಃಖದಲ್ಲಿಯೂ ಕುಟುಂಬವೊಂದು ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಐವರಿಗೆ ಜೀವದಾನ ನೀಡಿ ಸಾರ್ಥಕತೆ ಮೆರೆದಿದೆ.  ಕಳೆದ 9ರಂದು ಗಣೇಶ್(28) ಎಂಬುವರು ಮಂಡ್ಯದಿಂದ ಮೈಸೂರಿಗೆ ಬೈಕ್‍ನಲ್ಲಿ ಹೋಗುವಾಗ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರಿಂದ ಬೆಂಗಳೂರಿನ ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹಲವು ವಿಧದಲ್ಲಿ ಚಿಕಿತ್ಸೆ ನೀಡಿದರೂ ಸಹ ಗಣೇಶ್ ಅದಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ ಆಸ್ಪತ್ರೆ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಗಣೇಶ್ ಕುಟುಂಬಕ್ಕೆ ಮಾಹಿತಿ ನೀಡಿದರು. ಆ ದುಃಖದ ನಡುವೆಯೇ ಗಣೇಶ್ ಕುಟುಂಬ ತಮ್ಮ ಮಗನ ಮೇದೋಜಿರಕ ಗ್ರಂಥಿ, ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಕಣ್ಣುಗಳನ್ನು ದಾನ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ, ಬಿಜಿಎಸ್ ಆಸ್ಪತ್ರೆಯಲ್ಲೇ ದಾಖಲಾಗಿದ್ದ ಯಕೃತ್, ಮೇದೋಜಿರಕ ಮತ್ತು ಮೂತ್ರಪಿಂಡ ವೈಫಲ್ಯಗೊಂಡ ರೋಗಿಗಳಿಗೆ ಗಣೇಶ್ ಅವರ ಅಂಗಾಂಗಗಳನ್ನು ದಾನ ಮಾಡಲಾಯಿತು.

ಮತ್ತೊಂದು ಮೂತ್ರಪಿಂಡವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿನ ರೋಗಿಗೆ ದಾನ ಮಾಡಿದರೆ, ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಯಿತು ಎಂದು ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಮೂಲಕ ಗಣೇಶ್ ಅವರ ಅಂಗಾಂಗ ದಾನದಿಂದಾ ಐವರಿಗೆ ಜೀವದಾನ ಮಾಡಿದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin