ಪಾಂಡವಪುರದಲ್ಲಿದೆ ವಿದ್ಯಾರ್ಥಿ ಅಪಹರಣ ಜಾಲ..?

CHild-Kidnap

ಪಾಂಡವಪುರ, ಜು.16-ವಿದ್ಯಾರ್ಥಿಗಳ ಅಪಹರಣ ಜಾಲ ತಾಲ್ಲೂಕಿನಲ್ಲಿ ಬೀಡುಬಿಟ್ಟಿದೆ ಎಂಬ ಊಹಾಪೋಹ ನಾಗರಿಕರಲ್ಲಿ ಆತಂಕಕ್ಕೀಡುಮಾಡಿದೆ. ತಾಲ್ಲೂಕಿನಾದ್ಯಂತ ಸಂಚರಿಸುತ್ತಿದ್ದ ಅನಾಮಧೇಯ ಓಮ್ನಿ ಕಾರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ವಿದ್ಯಾರ್ಥಿಗಳ ಅಪಹರಣ ಜಾಲದ ಶಂಕೆ ಮೂಡಿಸಿದೆ.
ಕೆಲ ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬನಿಗೆ ಮೊಲ ಕೊಡಿಸುವ ಆಸೆ ತೋರಿಸಿ ಅಪಹರಣಕ್ಕೆ ಯತ್ನಿಸಿದ ಘಟನೆ ಜರುಗಿದ ನಂತರ ಅಪಹರಣ ಜಾಲದ ಬಗ್ಗೆ ಅಂತೆಕಂತೆ ಕಥೆಗಳು ಹುಟ್ಟಿಕೊಂಡಿವೆ.

ಏನಿದು ಹಿನ್ನೆಲೆ:

ಕೆಲ ದಿನಗಳ ಹಿಂದೆ ಏಳನೇ ತರಗತಿ ವಿದ್ಯಾರ್ಥಿ ವಿಜೇತ್ ಶಾಲೆ ಮುಗಿದ ಕೂಡಲೇ ಎಂದಿನಂತೆ ಕರಾಟೆ ತರಬೇತಿ ಮುಗಿಸಿಕೊಂಡು ಮನೆಗೆ ಬೈಸಿಕಲ್‍ನಲ್ಲಿ ವಾಪಾಸಾಗುತ್ತಿದ್ದಾಗ ಭಗತ್ ಹಾಗೂ ರಾಮಚಂದ್ರೇಗೌಡ ಎಂಬುವರಿಬ್ಬರು ಆತನನ್ನು ಕೃಷ್ಣನಗರದ ಪಾರ್ಕ್ ಬಳಿ ಮೊಲ ಕೊಡಿಸುವುದಾಗಿ ಪುಸಲಾಯಿಸಿ ಅಪಹರಿಸಿದ್ದರು.ನಂತರ ಹಾರೋಹಳ್ಳಿ ಸಮೀಪವಿರುವ ಪುರಸಭೆಯ ನೀರಿನ ಪಂಪ್‍ಹೌಸ್ ಬಳಿ ಮೊಲ ಹಿಡಿದುಕೊಡುವುದಾಗಿ ನಂಬಿಸಿ ವಿ.ಸಿ ನಾಲೆ ಏರಿ ಮೇಲೆ ಕರೆದೊಯುತ್ತಿದ್ದಾಗ ಬಾಲಕನ ಚಿಕ್ಕಪ್ಪ ಎಂ.ಎಚ್.ನಂದೀಶ್ ಹೆಸರಿಡಿದು ಕೂಗಿದಾಗ ಅಪಹರಣಕಾರರು ಆತನನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ರೀತಿ ಕಜ್ಜಿಕೊಪ್ಪಲು ಗ್ರಾಮದಲ್ಲಿಯೂ ಶಾಲಾ ಬಾಲಕನೋಬ್ಬ ಅಪಹರಣಕ್ಕೊಳಗಾಗಿರುವ ಶಂಕೆ ವ್ಯಕ್ತವಾಗಿದೆ. ತಾಲ್ಲೂಕಿನ ವಿವಿಧೆಡೆ ವಿದ್ಯಾರ್ಥಿಗಳ ಅಪಹರಣ ಯತ್ನ ಹೆಚ್ಚಾಗುತ್ತಿದ್ದಂತೆ ನಾಗರಿಕರಲ್ಲಿ ಆತಂಕ ಮನೆ ಮಾಡಿತ್ತು. ಇಂತಹ ಸಂದರ್ಭದಲ್ಲೇ ತಾಲ್ಲೂಕಿನಾದ್ಯಂತ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಓಮ್ನಿ ಕಾರು ನಾಪತ್ತೆಯಾಗಿರುವುದು ನಾಗರಿಕರಲ್ಲಿ ತಲ್ಲಣ ಉಂಟು ಮಾಡಿದೆ. ತಾಲ್ಲೂಕಿನಲ್ಲಿ ಭೀತ ಉಂಟು ಮಾಡಿರುವ ಅಪಹರಣಕಾರರನ್ನು ಈ ಕೂಡಲೇ ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಾಂಡವಪುರ ನಾಗರಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin