ಫುಟ್ಬಾಲ್ ಸ್ಟೇಡಿಯಂನಲ್ಲಿ ಕ್ರೀಡಾಪ್ರೇಮಿಗಳ ಘರ್ಷಣೆ ವೇಳೆ ಗೋಡೆ ಕುಸಿದು ಬಿದ್ದು 8 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Football

ಡಕಾರ್, ಜು.16-ಘರ್ಷಣೆಯಲ್ಲಿ ತೊಡಗಿದ್ದ ಕ್ರೀಡಾಪ್ರೇಮಿಗಳ ಮೇಲೆ ಗೋಡೆ ಕುಸಿದು ಬಿದ್ದು, ನಂತರ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದ ಎಂಟು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ ಸೆನೆಗಲ್‍ನ ಡಕಾರ್‍ನಲ್ಲಿ ನಡೆದ ಫುಟ್ಬಾಲ್ ಲೀಗ್ ಕಪ್ ಫೈನಲ್ ಪಂದ್ಯದ ವೇಳೆ ಸಂಭವಿಸಿದೆ.   ಈ ದುರಂತದಲ್ಲಿ ಯುವತಿಯೊಬ್ಬಳು ಸೇರಿದಂತೆ ಎಂಟು ಮಂದಿ ಸಾವಿಗೀಡಾಗಿ, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸೆನೆಗಲ್ ಕ್ರೀಡಾ ಸಚಿವ ಮತಾರ್ ಬಾ ತಿಳಿಸಿದ್ದಾರೆ. ಗಾಯಾಳುಗಳು ಡಕಾರ್‍ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಸ್ಥಳೀಯ ತಂಡಗಳಾದ ಯುಎಸ್ ಕ್ವಾಕಂ ಮತ್ತು ಸ್ಟೇಡ್ ಡಿ ಮಾಬೌರ್ ನಡುವೆ ಬಹು ನಿರೀಕ್ಷಿತ ಫೈನಲ್ ಪಂದ್ಯದ ವೇಳೆ ಬೆಂಬಲಿಗರು ಕ್ರೀಡೋತ್ಸಾಹದಲ್ಲಿ ಮೈಮರೆತ್ತಿದ್ದರು.

2-1 ಗೋಲುಗಳ ನಂತರ ಹೆಚ್ಚುವರಿ ಸಮಯದ ನಿರ್ಣಾಯಕ ಪಂದ್ಯದಲ್ಲಿ ಕ್ವಾಕಂ ಬೆಂಬಲಿಗರು ಸ್ಟೇಡ್ ಡಿ ಮಾಬೌರ್ ಬೆಂಬಲಿಗರ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದ ವೇಳೆಯಲ್ಲೇ ಗೋಡೆಯೊಂದು ಕುಸಿತು ಬಿದ್ದಿತು. ಇದೇ ಸಂದರ್ಭದಲ್ಲಿ ಉದ್ರಿಕ್ತ ಬೆಂಬಲಿಗರನ್ನು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಿದರು. ಈ ಘಟನೆಗಳಿಂದ ಭಯಭೀತರಾದ ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿದಾಗ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿ ಈ ದುರಂತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಕ್ರೀಡಾ ಸಚಿವರು ಸೆನೆಗಲ್‍ನಲ್ಲಿ ಮುಂದೆ ಇಂಥ ದುರ್ಘಟನೆಗಳು ಮರುಕಳಿಸದಂತೆ ಅಗತ್ಯವಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin