ರಾಷ್ಟ್ರಧ್ವಜ ಕೆಳಗಿಳಿಸಿ ಬಿಜೆಪಿ ಬಾವುಟ ಏರಿಸಿದರು..!

BJP-Flag

ವಿಜಯಪುರ, ಜು.16- ರಾಷ್ಟ್ರ ಭಕ್ತಿಯ ಪ್ರಬಲ ಪ್ರತಿಪಾದಕಾರದ ಬಿಜೆಪಿಯ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಬಿಜೆಪಿ ಧ್ವಜಾರೋಹಣ ನೆರವೇರಿಸುವ ವಿಲಕ್ಷಣ ಘಟನೆ ನಡೆದಿದೆ. ಜಿಲ್ಲೆಯ ಗಣಿಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಸವನಬಾಗೇವಾಡಿ ಮಂಡಳದ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೂ ಮುನ್ನ ಶಾಲಾ ಆವರಣದಲ್ಲಿರುವ ರಾಷ್ಟ್ರ ಧ್ವಜ ಸ್ತಂಭದಲ್ಲಿ ಬಿಜೆಪಿಯ ಬಾವುಟವನ್ನು ಹಾರಿಸಲಾಗಿದೆ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮ ಮುಗಿದ ನಂತರವೂ ಧ್ವಜ ಸ್ತಂಭದಿಂದ ಬಿಜೆಪಿ ಬಾವುಟವನ್ನು ಕೆಳಕ್ಕಿಳಿಸಿರಲಿಲ್ಲ. ಭಾನುವಾರವಾಗಿದ್ದರಿಂದ ಇಂದೂ ಕೂಡ ಬಿಜೆಪಿ ಬಾವುಟ ನಿರಾಜಮಾನವಾಗಿ ಹಾರಾಡುತ್ತಿತ್ತು.  ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಶೀಲಾಬಾಯಿ ಅವರು ಬಿಜೆಪಿ ಬಾವುಟ ಹಾರಿಸಲು ಮುತುವರ್ಜಿ ವಹಿಸಿದ್ದರು ಎಂದು ಹೇಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin