ರೈಲು ನಿಲ್ದಾಣ ನಿರ್ವಹಣೆಗೆ ಮಹಿಳಾಮಣಿಗಳ ಉಸ್ತುವಾರಿ

ಈ ಸುದ್ದಿಯನ್ನು ಶೇರ್ ಮಾಡಿ

Women--01

ಮುಂಬೈ, ಜು.16-ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಸೆಂಟ್ರಲ್ ರೈಲ್ವೆ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ಮುಂಬೈನ ಮತುಂಗಾ ಉಪನಗರ ರೈಲ್ವೆ ನಿಲ್ದಾಣ ನಿರ್ವಹಣೆಗೆ ಮಹಿಳಾ ಸಿಬ್ಬಂದಿಯನ್ನು ಮಾತ್ರ ನೇಮಿಸಲಾಗಿದೆ. ಕಳೆದ ಎರಡು ವಾರಗಳಿಂದ ಮತುಂಗಾ ಉಪನಗರ ರೈಲ್ವೆ ನಿಲ್ದಾಣವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ. ಒಟ್ಟು 30 ಮಹಿಳಾ ಸಿಬ್ಬಂದಿಯನ್ನು ಮತುಂಗಾ ರೈಲ್ವೆ ನಿಲ್ದಾಣಕ್ಕೆ ನೇಮಿಸಲಾಗಿದೆ.  30 ಜನರಲ್ಲಿ ಐವರು ಟಿಕೆಟ್ ಬುಕಿಂಗ್ ಕ್ಲರ್ಕ್‍ಗಳು, ಐವರು ರೈಲ್ವೆ ರಕ್ಷಣಾ ಸಿಬ್ಬಂದಿ ಹಾಗೂ 7 ಮಂದಿ ಟಿಕೆಟ್ ತಪಾಸಣಾ ಮಹಿಳಾ ಸಿಬ್ಬಂದಿ ಇದ್ದಾರೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಾನು 25 ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದ್ರೆ, ಬರೀ ಮಹಿಳಾ ಸಿಬ್ಬಂದಿ ಜೊತೆಗೆ ಮಾತ್ರ ಕಾರ್ಯ ನಿರ್ವಹಿಸುತ್ತೇನೆ ಅಂತಾ ನಾನು ಎಂದೂ ಯೋಚಿಸಿರಲಿಲ್ಲ ಎಂದು ಸಿಬ್ಬಂದಿ ಉಸ್ತುವಾರಿ ಮಮತಾ ಕುಲಕರ್ಣಿ ಹೇಳಿದ್ದಾರೆ.  ಅಲ್ಲದೇ, ಇಂದೊಂದು ಮ್ಯಾಜಿಕ್ ಎಂದಿರುವ ಮಮತಾ, ಮತುಂಗಾ ರೈಲ್ವೆ ನಿಲ್ದಾಣದ ಹೊಣೆ ವಹಿಸಿದಾಗನಿಂದಲೂ ಎಲ್ಲಾ ಸಿಬ್ಬಂದಿ ಪರಸ್ಪರ ಸಹಕಾರದೊಂದಿಗೆ ಒಂದೇ ಕುಟುಂಬದಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಇನ್ನು, ಈ ಬಗ್ಗೆ ಇನ್ನಷ್ಟು ಪ್ರಚಾರ ಹೆಚ್ಚಿಸಲು ಶೀಘ್ರದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin