ಬಸ್ ನಿಲ್ದಾಣದ ಶೌಚಾಲಯದಲ್ಲೇ ಆಯ್ತು ಹೆರಿಗೆ

Women--01

ಇಳಕಲ್, ಜು.16-ಶೌಚಾಲಯದಲ್ಲೇ ಹೆರಿಗೆಯಾದ ಘಟನೆಯೊಂದು ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಗಣಿ ಗ್ರಾಮದ ನಿರ್ಮಲಾ ಸಿದ್ಧೇಶ್ ಹಡಪದ (24) ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ ನಿರ್ಮಲಾ ಅವರು, ತವರೂರಾದ ಕಂದಗಲಗೆ ಗ್ರಾಮಕ್ಕೆ ತಮ್ಮ ಪತಿಯೊಂದಿಗೆ ತೆರಳುವ ಮಾರ್ಗಮಧ್ಯೆ ಇಳಕಲ್ ಬಸ್ ನಿಲ್ದಾಣದಲ್ಲಿ ಶೌಚಕ್ಕೆಂದು ಹೋಗಿದ್ದರು.
ಅಲ್ಲಿಯೇ ಹೊಟ್ಟೆ ನೋವು ಕಾಣಿಸಿಕೊಂಡು ನರಳುತ್ತಿದ್ದ ನಿರ್ಮಲಾಳನ್ನು ಗಮನಿಸಿದ ಬಸ್ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುವ ಮಹಿಳೆಯೊಬ್ಬರು ಅವರ ನೆರವಿಗೆ ಧಾವಿಸಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಹೆರಿಗೆಯಾದ ನಂತರ 108 ಆ್ಯಂಬುಲೆನ್ಸ್ ಮೂಲಕ ಇಳಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಅವಧಿ ಪೂರ್ವ (7ತಿಂಗಳು) ಹೆರಿಗೆಯಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin