ಆಸ್ತಿ ಕಲಹ : ಸೋದರನ ಮನೆಗೆ ಬೆಂಕಿ, 4 ಜನ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Bihar--1

ಕಟಿಯಾರ್,ಜು.17-ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸೋದರನ ಮನೆಗೆ ಬೆಂಕಿ ಇಟ್ಟ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಇಲ್ಲಿನ ಕೇದಾರ್‍ನಾಥ್(45), ಆತನ ಪತ್ನಿ ಪ್ರತಿಮಾದೇವಿ (40), ಮಕ್ಕಳಾದ ಸೋನುಕುಮಾರಿ(18) ಹಾಗೂ ಡಿಂಪಲ್‍ಕುಮಾರಿ ಮೃತಪಟ್ಟವರು.
ಆಸ್ತಿ ವಿವಾದ ಸಂಬಂಧ ಕೇದಾರ್‍ನಾಥ್ ಹಾಗೂ ಆತನ ಸಹೋದರರ ನಡುವೆ ಕಲಹವಾಗಿತ್ತು. ನಿನ್ನೆ ರಾತ್ರಿ ಕೇದಾರ್‍ನಾಥ್ ಕುಟುಂಬದವರು ಮಲಗಿದ್ದಾಗ ಆತನ ಸಹೋದರ ಮನೆಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾನೆ.

ನಿದ್ರೆಯ ಮಂಪರಿನಲ್ಲಿದ್ದ ಕೇದಾರ್‍ನಾಥ್ ಎಚ್ಚೆತ್ತುಕೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಬೆಂಕಿಯ ಕೆನ್ನಾಲಿಗೆ ಇಡೀ ಮನೆ ವ್ಯಾಪಿಸಿ ಇಡೀ ಕುಟುಂಬವೇ ಸಜೀವ ದಹನವಾಗಿದೆ ಎಂದು ಉಪಪೊಲೀಸ್ ಆಯುಕ್ತ ಚೋತಿಲ್‍ಯಾದವ್ ತಿಳಿಸಿದ್ದಾರೆ.  ಘಟನೆ ನಡೆದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು , ಆತನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin