ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಿ.ಕೆ.ಗಾಂಧಿ ಸ್ಪರ್ಧೆಗೆ ಶಿವಸೇನೆ ಆಕ್ಷೇಪ

GopalaKrishna-Gandhi--01

ನವದೆಹಲಿ, ಜು.17- ಆಗಸ್ಟ್ 5ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹಾತ್ಮಾಗಾಂಧೀಜಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಜಿ.ಕೆ.ಗಾಂಧಿ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಔಚಿತ್ಯವನ್ನು ಶಿವಸೇನೆ ಮುಖ್ಯಸ್ಥ ಉದ್ದವ್‍ಠಾಕ್ರೆ ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಯಾಕೂಬ್ ಮೆನನ್‍ಗೆ ಗಲ್ಲುಶಿಕ್ಷೆ ವಿಧಿಸುವುದನ್ನು ಗೋಪಾಲಕೃಷ್ಣ ಗಾಂಧಿ ವಿರೋಧಿಸಿ ಉಗ್ರನ ಪರ ನಿಲುವು ಹೊಂದಿದ್ದರು. ಇಂತಹ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ ಎಂದು ಕಟುವಾಗಿ ಟೀಕಿಸಿದರು. ಉಗ್ರವಾದದ ಬಗ್ಗೆ ಗೋಪಾಲಕೃಷ್ಣಗಾಂಧಿ ಸ್ಪಷ್ಟ ನಿಲುವು ವ್ಯಕ್ತಪಡಿಸುವಂತೆ ಠಾಕ್ರೆ ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin