ಕಾರು ಹರಿದು ಮೂರು ವರ್ಷದ ಬಾಲಕ ಸಾವು

Boy--01

ಬೆಂಗಳೂರು, ಜು.17- ಕಾರು ಚಾಲಕನ ಅಚಾತುರ್ಯದಿಂದಾಗಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯನಗರ ಕಾವೇರಿಲೇಔಟ್ ನಿವಾಸಿ ಮಹಂತೇಶ್ ಎಂಬುವರ ಪುತ್ರ ತರುಣ್‍ಕುಮಾರ್(3) ಮೃತಪಟ್ಟ ಬಾಲಕ.
ವಿನಾಯಕ ಲೇಔಟ್‍ನ ನಿವೇದಿತಾ ಶಾಲೆಯಲ್ಲಿ ಎಲ್‍ಕೆಜಿ ಓದುತ್ತಿದ್ದ ಈ ಬಾಲಕ ಮನೆ ಮುಂದೆ ಆಟವಾಡುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಆತನ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಿಜಯನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin