ಕಿಡ್ನ್ಯಾಪ್ ಯತ್ನ ಪ್ರಕರಣ : ಬಿಎಸ್‍ವೈ ಪಿಎಗೆ ನೋಟಿಸ್

Santosh-PA-Yadiyurappa

ಬೆಂಗಳೂರು, ಜು.17-ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪಿಎ ಸಂತೋಷ್‍ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸಂತೋಷ್ ಮನೆಗೆ ತೆರಳಿದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ನೋಟಿಸ್ ನೀಡಿದ್ದು, ಈ ವೇಳೆ ಸಂತೋಷ್ ತಂದೆ ವೀರಭದ್ರಯ್ಯ ಅವರು ನೋಟಿಸ್ ಸ್ವೀಕರಿಸಲಿಲ್ಲ. ಬಳಿಕ ಪೊಲೀಸರು ಮನೆಯ ಗೋಡೆ ಮೇಲೆ ನೋಟಿಸ್ ಅಂಟಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin