ಕೇಕ್ ತುಂಬಾ ಹುಳುಗಳು, ಬೇಕರಿ ತಿನಿಸು ತಿನ್ನೋವಾಗ ಹುಷಾರ್

ಈ ಸುದ್ದಿಯನ್ನು ಶೇರ್ ಮಾಡಿ

Cake--01

ಮೈಸೂರು, ಜು.17- ಗ್ರಾಹಕರೇ ಹೊರಗಡೆ ಆಹಾರ ಪದಾರ್ಥ ಸೇವಿಸುವಾಗ ಎಚ್ಚರ ವಹಿಸಿ… ಯಾಮಾರಿದರೆ ನಿಮ್ಮ ಜೀವಕ್ಕೆ ಬರಬಹುದು ಕುತ್ತು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೇಕ್‍ನಲ್ಲಿ ಹುಳುಗಳು ಪಿತುಗುಡುತ್ತಿದ್ದು, ಗ್ರಾಹಕರೊಬ್ಬರು ಇದನ್ನು ಕಂಡು ಹೌಹಾರಿದ್ದಾರೆ. ಸರಸ್ವತಿಪುರಂನಲ್ಲಿರುವ ಪ್ರತಿಷ್ಠಿತ ಬೇಕರಿಯೊಂದರಲ್ಲಿ ಗ್ರಾಹಕರೊಬ್ಬರು ಇಂದು ಬೆಳಗ್ಗೆ ಕೇಕ್ ಅನ್ನು ಖರೀದಿಸಿ ತಿನ್ನಲು ಕವರ್ ತೆಗೆದಿದ್ದಾರೆ. ಕೇಕ್ ಮುರಿಯುತ್ತಿದ್ದಂತೆ ಹುಳುಗಳು ಪಿತ ಪಿತ ಅಂತಾ ಹೊರಗೆ ಬಂದಿದ್ದು ಕೆಲ ಕ್ಷಣ ದಿಗ್ಭ್ರಾಂತರಾಗಿದ್ದಾರೆ.

ಇದನ್ನು ಕಂಡು ಗ್ರಾಹಕ ಆಕ್ರೋಶಗೊಂಡು ಬೇಕರಿಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡು ಇಂತಹ ಪ್ರತಿಷ್ಠಿತ ಬೇಕರಿಯಲ್ಲಿಯೇ ಹುಳುಗಳು ಇರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದೀರಾ. ಇನ್ನು ಒಳಗಡೆ ಇರುವ ಸಿಹಿ ಪದಾರ್ಥಗಳಲ್ಲಿ ಇನ್ನೆಷ್ಟು ಹುಳುಗಳಿವೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಈಗಾಗಲೇ ನಗರದಾದ್ಯಂತ ಡೆಂಘೀ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿದ್ದು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಇಂತಹ ಸಮಯದಲ್ಲೇ ಶುಚಿತ್ವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.

ಹೀಗಿರುವಾಗ ಹುಳು ಇರುವ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದೀರಾ. ನಾವೇನೋ ದೊಡ್ಡವರು ಪರವಾಗಿಲ್ಲ ನೋಡಿ ತಿನ್ನದೇ ಹಾಗೆ ಬಿಟ್ಟಿದ್ದೇವೆ. ಮಕ್ಕಳೇನಾದರೂ ತಿಂದು ಬಿಟ್ಟಿದ್ದರೆ ಅವರ ಆರೋಗ್ಯದ ಗತಿ ಏನಾಗಬೇಕು ಎಂದು ಗ್ರಾಹಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪೊಲೀಸರು , ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.  ಸೂಚನೆ: ಗ್ರಾಹಕರೇ ನೀವು ಆಹಾರ ಪದಾರ್ಥಗಳನ್ನು ಕೊಳ್ಳುವಾಗ ನಿಮ್ಮ ಬುದ್ಧಿವಂತಿಕೆ ಉಪಯೋಗಿಸಿ. ಆಹಾರ ಪದಾರ್ಥಗಳು ಗುಣಮಟ್ಟದ್ದಾಗಿದೆಯೇ ಅವುಗಳು ತಯಾರು ಮಾಡಿದ ದಿನಾಂಕಗಳನ್ನು ಪರಿಶೀಲಿಸಿಕೊಳ್ಳಿ. ಲೋಪ ದೋಷಗಳಿದ್ದರೆ ಕೂಡಲೇ ಮಾಲೀಕರ ಗಮನಕ್ಕೆ ತನ್ನಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin