ಜಿಎಸ್‍ಟಿ ಜಾರಿಯಿಂದ ಹೊಸ ಪರ್ವ ಆರಂಭ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

MOdi--02

ನವದೆಹಲಿ, ಜು.17-ದೇಶಾದ್ಯಂತ ಜಾರಿಗೆ ಬಂದಿರುವ ಏಕರೂಪದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ದತಿಯಿಂದ ಹೊಸ ಪರ್ವ ಆರಂಭವಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಿಎಸ್‍ಟಿ ಸ್ಫೂರ್ತಿಯಲ್ಲಿ ಈ ಮುಂಗಾರು ಅಧಿವೇಶನ ಸುಗಮವಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.   ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಸಂಸತ್‍ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಿಗೆ ಸದೃಢ ಬೆಳವಣಿಗೆಯು ಜಿಎಸ್‍ಟಿ ಸ್ಫೂರ್ತಿಯ ಇನ್ನೊಂದು ಹೆಸರು, ಈ ಪ್ರೇರಣೆಯು ಅಧಿವೇಶನಕ್ಕೆ ಸ್ಪೂರ್ತಿಯಾಗುತ್ತದೆ ಎಂದರು.

ಜಿಎಸ್‍ಟಿಯ ಯಶಸ್ವಿ ವರ್ಷಧಾರೆಯು ಮಳೆ ನಂತರ ಒಣಗಿದ ಮಣ್ಣಿನಿಂದ ಹೊರಹೊಮ್ಮುವ ವಾಸನೆಯಂಥ ಆಹ್ಲಾದಕರ ಪರಿಮಳದೊಂದಿಗೆ ಮುಂಗಾರು ಅಧಿವೇಶನವನ್ನು ಸಂತಸದಿಂದ ಆವರಿಸುವ ವಿಶ್ವಾಸ ನನಗಿದೆ ಎಂದು ವ್ಯಾಖ್ಯಾನಿಸಿದರು.  ರಾಜಕೀಯ ಪಕ್ಷಗಳು ಮತ್ತು ಸಂಸದರು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಗಾಗಿ ಕಾರ್ಯೋನ್ಮುಖರಾಗಿ, ಉತ್ತಮ ಚರ್ಚೆಯಲ್ಲಿ ಭಾಗವಹಿಸಿ, ವಿಷಯದ ಮೌಲ್ಯವನ್ನು ಹೆಚ್ಚಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.
ಈ ಅಧಿವೇಶ ದೇಶದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin