ತಮಿಳುನಾಡಿನ ನಾಲ್ವರು ಮೀನುಗಾರರನ್ನು ಬಂಧಿಸಿದ ಲಂಕಾ ನೌಕಾಪಡೆ

Srilanka-01

ರಾಮೇಶ್ವರ, ಜು.17-ಪ್ರಾದೇಶಿಕ ಜಲಗಡಿ ವ್ಯಾಪ್ತಿಯಲ್ಲಿ ಮೀನು ಹಿಡಿಯುತ್ತಿದ್ದ ತಮಿಳುನಾಡಿನ ನಾಲ್ವರು ಬೆಸ್ತರನ್ನು ಶ್ರೀಲಂಕಾ ನೌಕಾ ಪಡೆ ಬಂಧಿಸಿದೆ. ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಜಗದಪಟ್ಟಿನಂನ ನಾಲ್ವರು ಮೀನುಗಾರರನ್ನು ಬಂಧಿಸಲಾಗಿದ್ದು, ಶ್ರೀಲಂಕಾದ ನೆಡುಂತೀವು ಬಳಿ ಕರಾವಳಿಯಲ್ಲಿ ಇಂದು ಬೆಳಗ್ಗೆ ಮೀನು ಹಿಡಿಯುತ್ತಿದ್ದಾಗ ನೌಕಾಪಡೆ ಅವರನ್ನು ದೋಣಿ ಸಮೇತ ಬಂಧಿಸಿದೆ. ಇಂದು ನಾಲ್ವರನ್ನು ಬಂಧಿಸಿರುವುದರೊಂದಿಗೆ ಈ ತಿಂಗಳಲ್ಲಿ ಇದು ನಾಲ್ಕನೆ ಬಾರಿ ತಮಿಳು ಬೆಸ್ತರನ್ನು ಬಂಧಿಸಿದ್ದಾಗಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕೆಲವು ತಮಿಳುನಾಡು ಮೀನುಗಾರರನ್ನು ನೌಕಾಪಡೆ ಬಂಧಿಸಿತ್ತು ಎಂದು ರಾಮೇಶ್ವರಂನ ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin