ಪಕ್ಷದ ತೀರ್ಮಾನದಂತೆ ಮೀರಾಕುಮಾರ್ ಅವರಿಗೆ ಮತ : ಹೆಚ್ಡಿಕೆ

Kumaraswamy--1

ಬೆಂಗಳೂರು,ಜು.17-ಪಕ್ಷದ ತೀರ್ಮಾನದಂತೆ ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರಿಗೆ ನಾವು ಮತ ನೀಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.  ರಾಷ್ಟ್ರಪತಿ ಚುನಾವಣೆ ಮತದಾನಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ತೀರ್ಮಾನದಂತೆ ಜೆಡಿಎಸ್‍ನ ಎಲ್ಲ ಶಾಸಕರು ಯುಪಿಎ ಅಭ್ಯರ್ಥಿ ಅವರನ್ನು ಬೆಂಬಲಿಸುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಜೆಡಿಎಸ್‍ನ ಹಲವು ಶಾಸಕರು ಬಿಜೆಪಿ ಬೆಂಬಲಿಸುತ್ತಾರೆ ಎಂದು ಸಿ.ಟಿ.ರವಿ ಹೇಳಿರುವ ಮಾತು ಸತ್ಯಕ್ಕೆ ದೂರವಾದ ವಿಷಯ. ಪಕ್ಷದ ತೀರ್ಮಾನದಂತೆ ನಾವೆಲ್ಲ ಒಟ್ಟಾಗಿ ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ತಿಳಿಸಿದ ಅವರು, ಎಲ್ಲ ಶಾಸಕರೊಂದಿಗೆ ತೆರಳಿ ಮತ ಚಲಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin