ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಯೋಧ ಮತ್ತು ಬಾಲಕಿ ಸಾವು

fIRING--NAXALA

ಶ್ರೀನಗರ, ಜು.17- ಈಶಾನ್ಯ ರಾಜ್ಯ ಸಿಕ್ಕಿಂ ಡೋಕಾಲದಲ್ಲಿ ಚೀನಾದೊಂದಿಗೆ ಕಳೆದ ಒಂದು ತಿಂಗಳಿನಿಂದ ಗಡಿ ಬಿಕ್ಕಟ್ಟು ಮುಂದುವರಿದಿರುವಾಗಲೇ ಇತ್ತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನಿ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ  ದಾಳಿಯಲ್ಲಿ ಭಾರತೀಯ ಸೇನೆಯ ಯೋಧ ಮತ್ತು ಒಂಭತ್ತು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಜೌರಿ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಮೇಲೆ ಪಾಕ್ ಯೋಧರು ಇಂದು ಮುಂಜಾನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಈ ಏಕ ಪಕ್ಷೀಯ ದಾಳಿಯಲ್ಲಿ ಯೋಧನೊಬ್ಬ ಹುತಾತ್ಮನಾಗಿ, ಬಾಲಕಿಯೊಬ್ಬಳು ಮೃತಪಟ್ಟಳು.

ಪಾಕಿಸ್ತಾನಿ ರೇಂಜರ್‍ಗಳ ದುಸ್ಸಾಹಸಕ್ಕೆ ನಮ್ಮ ಯೋಧರೂ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ಧಾರೆ. ಕಳೆದ ಜೂನ್‍ನಿಂದ ಪಾಕಿಸ್ತಾನವು ಪುನರಾವರ್ತಿತ ಕದನ ವಿರಾಮ ಉಲ್ಲಂಘಿಸುತ್ತಲೇ ಇದೆ. ಕಾಶ್ಮೀರ ಗಡಿಯಲ್ಲಿ 20ಕ್ಕೂ ಹೆಚ್ಚು ಯುದ್ಧ ವಿರಾಮ ಉಲ್ಲಂಘನೆ. ಬಿಎಟಿ ತಂಡದಿಂದ ಆಕ್ರಮಣ ಮತ್ತು ಒಳ ನುಸುಳುವಿಕೆ ಪ್ರಕರಣಗಳು ನಡೆದಿದ್ದು ಯೋಧರ ಸಾವು -ನೋವಿನೊಂದಿಗೆ ಭಯೋತ್ಪಾದಕರೂ ಹತರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin