ಮುಂಬರುವ ಚುನಾವಣೆಗೆ ರೆಡಿಯಾಗುವಂತೆ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

Election--01

ಬೆಂಗಳೂರು, ಜು.17-ಚುನಾವಣೆ ಸಮೀಪಿಸುತ್ತಿದೆ ಮೊದಲು ಕ್ಷೇತ್ರದ ಅಭಿವೃದ್ಧಿ ಮತ್ತು ಚುನಾವಣೆ ಗೆಲ್ಲುವತ್ತ ಗಮನ ಕೊಡಿ. ಪಕ್ಷ ಸಂಘಟನೆ, ಪದಾಧಿಕಾರಿಗಳ ನೇಮಕದ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರಿಗೆ ಬಿಡಿ. ಅನಗತ್ಯವಾಗಿ ವಿವಾದ ಸೃಷ್ಟಿಸಿ ಗೊಂದಲ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ತಾಕೀತು ಮಾಡಿದ್ದಾರೆ.  ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಶಾಸಕರಿಗೆ ಸ್ಥಾನ ಕಲ್ಪಿಸದೇ ಇರುವ ಬಗ್ಗೆ ತೀವ್ರ ಅಸಮಾಧಾನ ಕೇಳಿ ಬಂದಿತ್ತು. ಎಸ್.ಟಿ.ಸೋಮಶೇಖರು ಸೇರಿದಂತೆ ಕೆಲವು ಶಾಸಕರು ಹೈಕಮಾಂಡ್‍ಗೆ ಪತ್ರ ಬರೆಯುವುದು, ಮಾಧ್ಯಮಗಳಿಗೆ ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದರು.
ಇದರಿಂದ ಸಿಡಿಮಿಡಿಯಾಗಿರುವ ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ಬಹಿರಂಗ ಹೇಳಿಕೆ ನೀಡುವ ಶಾಸಕರಿಗೆ ಟಾಂಗ್ ನೀಡಿದರು.

ಸರ್ಕಾರದ ಯೋಜನೆ, ಸಾಧನೆಗಳನ್ನು ಜನರಿಗೆ ತಲುಪಿಸುವ  ಪ್ರಾಮಾಣಿಕ ಪ್ರಯತ್ನ ಮಾಡಿ. ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಕುರಿತು ಯೋಜನೆ ರೂಪಿಸಿಕೊಳ್ಳಿ. ಅನಗತ್ಯ ವಿಷಯಗಳಿಗೆ ತಲೆಕೆಡಿಸಿಕೊಂಡು ಸಮಯ ಹಾಳುಮಾಡಬೇಡಿ.   ಕೆಪಿಸಿಸಿ ಪದಾಧಿಕಾರಿಗಳ ವಿಚಾರವನ್ನು ಪಕ್ಷದ ಅಧ್ಯಕ್ಷ ಪರಮೇಶ್ವರ್ ಮತ್ತು ಹೈಕಮಾಂಡ್ ನೋಡಿಕೊಳ್ಳುತ್ತದೆ. ಆ ಬಗ್ಗೆ ಶಾಸಕರಿಗೆ ಕಾಳಜಿ ಬೇಕಿಲ್ಲ ಎಂದು ಹೇಳಿದರು. ಬೇಕಾಬಿಟ್ಟಿಯಾಗಿ ಹೇಳಿಕೆ ಕೊಟ್ಟು ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಬಾರದು. ಜವಾಬ್ದಾರಿಯುತವಾಗಿ ನಡೆದಿಕೊಳ್ಳಿ ಎಂದು ಅತೃಪ್ತ ಶಾಸಕರಿಗೆ ಸಿಎಂ ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin