ಲಾಂಗು-ಮಚ್ಚಿನಿಂದ ಹಲ್ಲೆ ಮಾಡಿ ಯುವಕನ ಬಲಗೈ ಕತ್ತರಿಸಿದರು

ಈ ಸುದ್ದಿಯನ್ನು ಶೇರ್ ಮಾಡಿ

Crime-Scene

ಮಂಡ್ಯ,ಜು.17- ದುಷ್ಕರ್ಮಿಗಳ ಗುಂಪೊಂದು ಲಾಂಗು, ಮಚ್ಚಿನಿಂದ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದು , ಯುವಕನ ಬಲಗೈ ತುಂಡಾಗಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.  ಪಟ್ಟಣದ ಲೀಲಾವತಿ ನಗರದಲ್ಲಿರುವ ವಿಜಯ ವಿದ್ಯಾಸಂಸ್ಥೆ ಬಳಿ ರಾತ್ರಿ ವರುಣ್ ಎಂಬ ಯುವಕ ಇಬ್ಬರು ಗೆಳೆಯರೊಂದಿಗೆ ಮಾತನಾಡುತ್ತಿದ್ದ ನಿಂತಿದ್ದಾಗ ಅಲ್ಲಿಗೆ ಆರು ಜನರ ಗುಂಪೊಂದು ಬಂದಿದೆ.  ಅದರಲ್ಲಿ ಇಬ್ಬರು ಇವರ ಹತ್ತಿರಕ್ಕೆ ಬಂದು ವರುಣ್‍ನನ್ನು ನಿನ್ನ ಬಳಿ ಮಾತನಾಡಬೇಕೆಂದು ಆಚೆ ಕರೆದೊಯ್ದಿದ್ದಾರೆ. ತಕ್ಷಣ ಆರು ಜನರು ಸೇರಿ ಲಾಂಗು, ಮಚ್ಚುಗಳಿಂದ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ಹಲ್ಲೆಯಲ್ಲಿ ವರುಣ್‍ನ ಬಲಗೈ ತುಂಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಲೈ 10ರಂದು ಇದೇ ಲೀಲಾವತಿ ನಗರದಲ್ಲಿ ಒಂದು ಅಪಘಾತ ಸಂಭವಿಸಿತ್ತು. ಆ ಸಂದರ್ಭ ವರುಣ್ ಕೆಲವರ ಮೇಲೆ ಹಲ್ಲೆ ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು , ವರುಣ್ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ.
ಈ ಹಿನ್ನೆಲೆಯಲ್ಲಿ ರಾತ್ರಿ ಈ ಹಲ್ಲೆ ನಡೆದಿದ್ದು , ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin