ಸಂಸತ್ ಉಭಯ ಸದನಗಳು ನಾಳೆಗೆ ಮುಂದೂಡಿಕೆ

Session-Parliamne-t

ನವದೆಹಲಿ, ಜು.17-ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಅಗಲಿದ ಸದಸ್ಯರು ಮತ್ತು ಗಣ್ಯರಿಗೆ ಸಂತಾಪ ಸೂಚಿಸಿ ಲೋಕಸಭೆ ಮತ್ತು ರಾಜ್ಯಸಭೆಯನ್ನು ನಾಳೆಗೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಮೊದಲ ದಿನದ ಕಲಾಪ ಸಮಾವೇಶಗೊಂಡಾಗ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಕ್ ಅಬ್ದುಲ್ಲಾ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಧುರೀಣ ಪಿ.ಕೆ.ಕುನ್‍ಹಲಿಕುಟ್ಟಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಳಿಕ ಚಿತ್ರನಟ, ಗುರುದಾಸ್‍ಪುರ ಸಂಸದ ವಿನೋದ್ ಖನ್ನಾ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಅನಿಲ್ ದವೆ ಸೇರಿದಂತೆ ನಿಧನರಾದ ಮಾಜಿ ಸದಸ್ಯರಿಗೆ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಲಾಯಿತು. ನಂತರ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕಲಾಪವನ್ನು ನಾಳೆಗೆ ಮುಂದೂಡಿದರು.

ರಾಜ್ಯಸಭೆ:
ಇತ್ತೀಚೆಗೆ ನಿಧನರಾದ ಸದಸ್ಯೆ ಪಲ್ಲವಿ ರೆಡ್ಡಿ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ರಾಜ್ಯಸಭೆಯನ್ನು ಸಭಾಪತಿ ಹಮೀದ್ ಅನ್ಸಾರಿ ನಾಳೆಗೆ ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin