ರಾಜಕೀಯ ಪ್ರಚೋದನೆಗೆ ಅಮಾಯಕರ ಮೇಲೆ ಹಲ್ಲೆ : ಸಿ.ಟಿ.ರವಿ

Chikkamagaluru

ಚಿಕ್ಕಮಗಳೂರು,ಜು.17- ಇಂದಿನಗರ ಬಡಾವಣೆಯ ಅಮಾಯಕರನ್ನು ರಾಜಕೀಯಕ್ಕೆ ಪ್ರಚೋದಿಸಿ ಹಲ್ಲೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.  ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾನಗರ ಬಡಾವಣೆಯ ಕಲ್ಲುದೊಡ್ಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಳಾಂತರದ ವಿರುದ್ಧ ಗಾಯಾಳು ರಾಜೇಶ್ ಪ್ರತಿಭಟನೆ ನಡೆಸಿದ್ದರು.

ಆ ಕಾರಣದಿಂದ ರಾಜೇಶ್ ಅವರ ಮೇಲೆ ಮತ್ತೊಂದು ಗುಂಪು ಹಲ್ಲೆ ಮಾಡಿತ್ತು. ವೈಯಕ್ತಿಕ ಸಮಸ್ಯೆ ಇದ್ದರೆ ಕಾನೂನು ಮುಖಾಂತರ ಬಗೆಹರಿಸಿಕೊಳ್ಳಬಹುದು. ಹಲ್ಲೆ ಮಾಡುವ ಮಟ್ಟಕ್ಕೆ ಹೋಗಬಾರದು. ಇದಕ್ಕೆ ಕಾರಣರಾದವರೇ ಯಾರೇ ಆಗಲಿ ಶಿಕ್ಷೆಯಾಗಬೇಕು ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin