ಅಬ್ಬಬ್ಬಾ… ಬಿಬಿಎಂಪಿ ಅಧಿಕಾರಿಗಳ ಮರ್ಮಾನೇ ಗೊತ್ತಾಗಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Mayor--01

ಬೆಂಗಳೂರು, ಜು.18-ಸಮುದ್ರದ ಆಳನಾದರೂ ಕಂಡುಹಿಡಿಯಬಹುದು, ಅಬ್ಬಬ್ಬಾ… ಬಿಬಿಎಂಪಿ ಅಧಿಕಾರಿಗಳ ಮರ್ಮಾನೇ ಗೊತ್ತಾಗಲ್ಲ..! ಬೆಳ್ಳಂಬೆಳಗ್ಗೆ ಉಪಮೇಯರ್ ಮತ್ತಿತರ ಅಧಿಕಾರಿಗಳೊಂದಿಗೆ ಟೌನ್ಹಾಲ್ ಸಮೀಪದ ಸಿಟಿ ಶೆಡ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳ ಕರ್ಮಕಾಂಡ ಕಂಡಾಗ ಮೇಯರ್ ಅವರ ಬಾಯಿಂದ ಉದುರಿದ ಅಣಿಮುತ್ತುಗಳಿವು.  ಮೈ ಷುಗರ್ ಬಿಲ್ಡಿಂಗ್ ಮುಂಭಾಗದ ಪಾಲಿಕೆ ಖಾಲಿ ಜಾಗದ ಪರಿಶೀಲನೆ ನಡೆಸಿದಾಗ ಕೋಟ್ಯಂತರ ರೂ. ಮೌಲ್ಯದ ಪ್ರದೇಶದಲ್ಲಿ ಕೆಟ್ಟು ನಿಂತ 127ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿತ್ತು. ಕೂಡಲೇ ವಾಹನಗಳನ್ನು ತೆರವುಗೊಳಿಸಿ ಖಾಲಿ ಪ್ರದೇಶವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸುವಂತೆ ಮೇಯರ್ ಅವರು ಸೂಚನೆ ನೀಡಿದರು.

ನಾಗರಿಕರ ಲಕ್ಷಾಂತರ ರೂ. ತೆರಿಗೆ ಹಣ ಖರ್ಚು ಮಾಡಿ ಖರೀದಿಸಲಾಗಿದ್ದ ಕಾಂಪ್ಯಾಕ್ಟರ್ಗಳನ್ನು ಅಧಿಕಾರಿಗಳು ಬಳಕೆ ಮಾಡದೆ ನಿಲ್ಲಿಸಲಾಗಿತ್ತು. ಅದೇ ರೀತಿ ಶವ ಸಾಗಿಸುವ 8 ವಾಹನಗಳನ್ನು ಮೂಲೆಗುಂಪು ಮಾಡಲಾಗಿತ್ತು.  ಚೆನ್ನಾಗಿರುವ ಗಾಡಿಗಳನ್ನು ಗುಜರಿಗೆ ಹಾಕಿ ಹಣ ಹಾಳು ಮಾಡುವ ಬದಲು ಕೆಟ್ಟು ನಿಂತಿರುವ ಗಾಡಿಗಳನ್ನು ರಿಪೇರಿ ಮಾಡಿ ಬಳಸುವಂತೆ ಮೇಯರ್ ಅವರು ತಾಕೀತು ಮಾಡಿದರು.  ಕಾಂಪ್ಯಾಕ್ಟರ್ಗಳು ಮತ್ತು ಶವ ಸಾಗಿಸುವ ವಾಹನಗಳು  ವರ್ಕಿಂಗ್ ಕಂಡೀಷನ್ನಲ್ಲಿದ್ದರೂ ಮೂಲೆ ಗುಂಪು ಮಾಡಿರುವ ಅಧಿಕಾರಿಗಳನ್ನು ಮೇಯರ್ ಅವರು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಕೆಲ ಚಾಲಕರು ಪಾಲಿಕೆಯ 25ಕ್ಕೂ ಹೆಚ್ಚು ಕಾಂಪ್ಯಾಕ್ಟರ್ಗಳನ್ನು ಅಧಿಕಾರಿಗಳು ಗುತ್ತಿಗೆಗೆ ನೀಡಿ ತಿಂಗಳಿಗೆ ಇಷ್ಟೆಂದು ಹಣ ಪಡೆಯುತ್ತಾ ಪಾಲಿಕೆಗೆ ವಂಚಿಸುತ್ತಿರುವ ಮಾಹಿತಿ ಬಹಿರಂಗ ಪಡಿಸಿದರು.  ಅಧಿಕಾರಿಗಳ ಈ ಕರ್ಮಕಾಂಡ ಕಂಡು ಬೆಚ್ಚಿಬಿದ್ದ ಮೇಯರ್ ಅವರು ಪದೇ ಪದೇ ಗಾಡಿಗಳ ಕೊರತೆ ಇದೆ ಎಂದು ದೂರು ಹೇಳುತ್ತೀರಾ. ಆದರೆ ಇಲ್ಲಿ ಸರಿಯಾಗಿ ಮೈನ್ಟೆನೆನ್ಸ್ ಆಗುತ್ತಿಲ್ಲ. ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕೂಡಲೇ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ಜೊತೆಗೆ ಸಾರಿಗೆಗೆ ಒಬ್ಬ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಘೋಷಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin