ಅಸ್ವಾಭಾವಿಕ ಸೆಕ್ಸ್, ಅತ್ಯಾಚಾರ : ಬಾಲ ಗಂಗಾಧರ ತಿಲಕ್’ರ ಮರಿಮೊಮ್ಮಗ ಅರೆಸ್ಟ್

Rape--Tilak--01

ಪುಣೆ, ಜು.18-ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಅವರ ಮರಿ ಮೊಮ್ಮಗ ರೋಹಿತ್ ತಿಲಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ತಡರಾತ್ರಿ ತಿಲಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ರೋಹಿತ್-ಹಿರಿಯ ಕಾಂಗ್ರೆಸ್ ಧುರೀಣ ಮತ್ತು ಮಾಜಿ ಸಂಸದ ದಿವಂಗತ ಜಯಂತ್‍ರಾವ್ ತಿಲಕ್ ಅವರ ಮೊಮ್ಮಗನೂ ಆಗಿದ್ದಾರೆ.

ರೋಹಿತ್ ಕೆಲವು ವರ್ಷಗಳಿಂದ ತನಗೆ ಪರಿಚಯವಿದ್ದು, ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ಧಾರೆ. ಅಲ್ಲದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೂ ಬಲವಂತ ಮಾಡಿದ್ದಾರೆ ಎಂದು 40 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ತಿಲಕ್‍ರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ರೋಹಿತ್ ತಿಲಕ್ 2014ರಲ್ಲಿ ಮಹಾರಾಷ್ಟ್ರದ ಪುಣೆಯ ಕಸಬಾಪೇಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಗಣೇಶ್ ಬಾಪಟ್ ವಿರುದ್ಧ ಪರಾಭವಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin