ಆಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸಕ್ಕೆ 6 ತಿಂಗಳಲ್ಲಿ 1,622 ಜನ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Afganistan--041

ಕಾಬೂಲ್, ಜು.18-ಉಗ್ರರ ಅಟ್ಟಹಾಸದಿಂದ ನಲುಗುತ್ತಿರುವ ಸಮರ ಸಂತ್ರಸ್ತ ಆಫ್ಘಾನಿಸ್ತಾನದಲ್ಲಿ ಈ ವರ್ಷದ ಆರು ತಿಂಗಳ ಅವಧಿಯಲ್ಲಿ 1,622 ಮಂದಿ ಮೃತಪಟ್ಟು, 3,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.   ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ದಾಳಿಯಿಂದಲೇ ಅತಿ ಹೆಚ್ಚು ಸಾವು-ನೋವು ಉಂಟಾಗಿದೆ. ಸತ್ತವರಲ್ಲಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಯೋಧರು ಮತ್ತು ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಬಂಡುಕೋರರೂ ಸೇರಿದ್ದಾರೆ.

2017ರ ಪ್ರಥಮಾರ್ಧದಲ್ಲಿ ಮೃತಪಟ್ಟ 1,622 ಮಂದಿಯಲ್ಲಿ ಶೇ.20ರಷ್ಟು ಸಾವುಗಳು ರಾಜಧಾನಿ ಕಾಬೂಲ್‍ನಲ್ಲೇ ಸಂಭವಿಸಿವೆ ಎಂದು ಆಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಸಹಾಯಕ ಘಟಕ(ಯುಎನ್‍ಎಎಂಎ) ತಿಳಿಸಿದೆ. ಈ ಸಂಸ್ಥೆಯು ಯುದ್ಧ ಹಾಗೂ ಹಿಂಸಾಚಾರಪೀಡಿತ ಆಫ್ಘನ್‍ನಲ್ಲಿ 2009ರಿಂದಲೂ ನಾಗರಿಕರ ಸಾವು-ನೋವು ಪ್ರಕರಣಗಳನ್ನು ದಾಖಲಿಸುತ್ತಿವೆ.  ತಾಲಿಬಾನ್, ಐಸಿಸ್ ಮತ್ತು ಸರ್ಕಾರಿ ವಿರೋಧಿ ಬಣಗಳು ನಡೆಸಿದ ದಾಳಿಗಳಲ್ಲೇ ಅಧಿಕ ಸಾವುಗಳ ಸಂಭವಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin