ಕರ್ತವ್ಯದ ವೇಳೆ ಫೋನ್ ಬಳಸಬೇಡ ಎಂದ ಮೇಜರ್’ನನ್ನ ಗುಂಡಿಟ್ಟು ಕೊಂದ ಯೋಧ

Major--01

ಶ್ರೀನಗರ, ಜು.18-ಕರ್ತವ್ಯದ ವೇಳೆ ಫೋನ್ ಬಳಸದಂತೆ ತಾಕೀತು ಮಾಡಿದ ಸೇನೆ ಮೇಜರ್ ಒಬ್ಬರು ಯೋಧನ ಗುಂಡೇಟಿಗೆ ಬಲಿಯಾಗಿರುವ ಘಟನೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಇಂದು ಸಂಭವಿಸಿದೆ. ರಾಷ್ಟ್ರೀಯ ರೈಫಲ್ಸ್ ಸಶಸ್ತ್ರ ದಳ (ಆರ್‍ಆರ್‍ಎಸಿ) ಮೇಜರ್ ಶಿಖರ್ ಥಾಪ ಯೋಧನ ಗುಂಡೇಟಿಗೆ ಮೃತಪಟ್ಟ ನತದೃಷ್ಟ ಉನ್ನತ ಸೇನಾಧಿಕಾರಿಯಾಗಿದ್ದಾರೆ. ಉತ್ತರ ಕಾಶ್ಮೀರದ ಉರಿ ಸೆಕ್ಟರ್‍ನ ಬಚ್ಚರ್ ಫೋಸ್ಟ್‍ನಲ್ಲಿ ಈ ಘಟನೆ ನಡೆದಿದೆ. ಕರ್ತವ್ಯದ ವೇಳೆ ಮೊಬೈಲ್ ಫೋನ್ ಬಳಸುತ್ತಿದ್ದ ಅದೇ ದಳದ ಯೋಧನಿಗೆ ಮೇಜರ್ ಶಿಖರ್ ಬಳಸದಂತೆ ತಾಕೀತು ಮಾಡಿ ವಾಗ್ದಂಡನೆ ವಿಧಿಸಿದ್ದರು. ಇದರಿಂದ ಕುಪಿತನಾದ ಆತ ತನ್ನ ಸರ್ವಿಸ್ ರೈಫಲ್‍ನಿಂದ ಅವರ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೇನೆಯಲ್ಲಿ ಸಹದ್ಯೋಗಿ ಹತ್ಯೆ ಪ್ರಕರಣಗಳು (ಯೋಧ ಅಥವಾ ಹಿರಿಯ ಅಧಿಕಾರಿ) ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಮತ್ತೊಂದು ಘಟನೆ ನಡೆದಿದೆ. ಕಳೆದ ವರ್ಷ ಸೇನಾಪಡೆಯಲ್ಲಿ ಇಂಥ ಮೂರು ಪ್ರಕರಣಗಳು ನಡೆದ ಬಗ್ಗೆ ಕಳೆದ ಮಾರ್ಚ್‍ನಲ್ಲಿ ನಡೆದ ಸಂಸತ್ ಅಧಿವೇಶನದ ವೇಳೆ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಸದನಕ್ಕೆ ಮಾಹಿತಿ ನೀಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin