ಕೊರೆಸಿದ ಬೋರ್‍ಗಳೆಲ್ಲ ಫೇಲ್, ಕುಸಿದು ಬಿದ್ದು ಸಾವನ್ನಪ್ಪಿದ ರೈತ

ಈ ಸುದ್ದಿಯನ್ನು ಶೇರ್ ಮಾಡಿ

borewell

ಚಳ್ಳಕೆರೆ, ಜು.18- ಒಣಗುತ್ತಿರುವ ತೋಟ ಉಳಿಸಿಕೊಳ್ಳಲು ಕೊರೆಸಿದ ಮೂರು ಬೋರ್‍ವೆಲ್‍ಗಳೂ ವಿಫಲವಾದ ಹಿನ್ನೆಲೆಯಲ್ಲಿ ಆಘಾತಕ್ಕೊಳಗಾದ ರೈತರೊಬ್ಬರು ತನ್ನ ತೋಟದಲ್ಲಿ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಸಂಭವಿಸಿದೆ.
ಲಕ್ಷಾಂತರ ರೂ. ಖರ್ಚು ಮಾಡಿ ಹುಲಿಕುಂಟೆ ಗ್ರಾಮದ ನರಸಿಂಹಯ್ಯ ಎಂಬ ರೈತ ಅಡಿಕೆ, ತೆಂಗು ತೋಟ ಮಾಡಿದ್ದರು. ಈ ಮೊದಲು ಕೊರೆಸಿದ್ದ ಬೋರ್‍ವೆಲ್‍ಗಳಲ್ಲಿ ನೀರು ಬತ್ತಿಹೋಗಿತ್ತು. ಇದರಿಂದ ನರಸಿಂಹಯ್ಯ ನಿನ್ನೆ ತೋಟದಲ್ಲಿ ಮತ್ತೆ ಬೋರ್‍ವೆಲ್ ಕೊರೆಸಲು ಸಿದ್ಧರಾದರು.

ನಿನ್ನೆ ಸಂಜೆಯಿಂದ ಮಧ್ಯರಾತ್ರಿವರೆಗೆ ಸತತವಾಗಿ ಮೂರು ಬೋರ್‍ವೆಲ್‍ಗಳನ್ನು ಕೊರೆಯಲಾಯಿತು. ದುರದೃಷ್ಟವಶಾತ್ ಯಾವ ಬೋರ್‍ನಲ್ಲೂ ಒಂದೇ ಒಂದು ಹನಿ ನೀರೂ ಬರಲಿಲ್ಲ. ಮೂರನೇ ಬೋರ್‍ನಲ್ಲಾದರೂ ನೀರು ಬರಬಹುದು ಎಂದು ಕಾಯುತ್ತಿದ್ದ ನರಸಿಂಹಯ್ಯ ನೀರಿನ ಅಂಶವನ್ನು ಕಾಣದೆ ಅಘಾತಕ್ಕೊಳಗಾಗಿ ಕುಸಿದು ಬಿದ್ದು, ಸಾವನ್ನಪ್ಪಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.  ತೋಟ ಮಾಡಲು ಮತ್ತು ಬೋರ್‍ವೆಲ್‍ಗಳನ್ನು ಕೊರೆಸಲು ನರಸಿಂಹಯ್ಯ ಲಕ್ಷಾಂತರ ರೂ. ಸಾಲ ಮಾಡಿದ್ದರು. ಆದರೂ ಸಮೃದ್ಧವಾಗಿ ಬೆಳೆದಿದ್ದ ಅಡಿಕೆ, ತೆಂಗು, ದಾಳಿಂಬೆ, ಬಾಳೆ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇ ಈ ಅಘಾತಕ್ಕೆ ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin