ಪಿಒಕೆ ಭಾರತಕ್ಕೆ ಸೇರಿದ್ದು ಎಂದು ಮೊದಲ ಬಾರಿ ಅಧಿಕೃತವಾಗಿ ಘೋಷಿಸಿದ ಭಾರತ

POK

ನವದೆಹಲಿ, ಜು.18-ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರಿಮಂಡಲ ಅತ್ಯಂತ ಜನಪ್ರಿಯ ಸಚಿವರಾದ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ಧಾರೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಸೇರಿದ್ದು, ಆ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಪಾಕಿಸ್ತಾನದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಅವರು ಗುಡುಗುವ ಮೂಲಕ ಇಸ್ಲಾಮಾಬಾದ್‍ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವರ ಈ ಹೇಳಿಕೆಯಿಂದ ಪಾಕಿಸ್ತಾನ ತಬ್ಬಿಬ್ಬಾಗಿದ್ದರೆ, ಭಾರತ ಹೆಮ್ಮೆಯಿಂದ ಬೀಗುವಂತಾಗಿದೆ.

ಪಿತ್ತಕೋಶದಲ್ಲಿ ಗಡ್ಡೆ ಸಮಸ್ಯೆಯಿಂದಾಗಿ ನರಳುತ್ತಿರುವ ಪಿಒಕೆಯ 24 ವರ್ಷದ ಓಸಮಾ ಅಲಿ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ಎದುರು ನೋಡುತ್ತಿದ್ದಾರೆ. ಆದರೆ ಪಾಕಿಸ್ತಾನ ವಿದೇಶಾಂಗ ಸಚಿವ ಸರ್ತಾಜ್ ಅಜಿಜ್ ಅಲಿಗೆ ಅನುಮತಿ ಪತ್ರ ನೀಡಲು ಹಾಗೂ ವೀಸಾ ಕಲ್ಪಿಸಲು ಅಡ್ಡಿಯಾಗಿದ್ದಾರೆ.  ಈ ವಿಷಯವನ್ನು ಅರಿತ ಸುಷ್ಮಾ, ಓಸಮಾ ಅಲಿ ಭಾರತಕ್ಕೆ ಸೇರಿದ ಪಿಒಕೆಯ ಪ್ರಜೆ. ಹೀಗಾಗಿ ಆತನಿಗೆ ಖಂಡಿತ ಭಾರತದಲ್ಲಿ ಉತ್ತಮ ಚಿಕಿತ್ಸೆ ಲಭಿಸುತ್ತದೆ. ಅಲ್ಲದೇ ಆತ ಇಲ್ಲಿಗೆ ಬರಲು ಅಗತ್ಯವಾದ ಎಲ್ಲ ನೆರವನ್ನು ಭಾರತ ಸರ್ಕಾರ ನೀಡುತ್ತದೆ. ಈ ವಿಷಯದಲ್ಲಿ ಪಾಕಿಸ್ತಾನದ ಅನುಮತಿಯನ್ನಾಗಲಿ ಅಥವಾ ಅಪ್ಪಣೆಯನ್ನಾಗಿ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ ತಿರುಗೇಟು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin