ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಠಾಣೆಯಿಂದಲೇ ಕುರಿ ಕಳ್ಳ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Jail-Arrest

ನಂಜನಗೂಡು, ಜು.18-ಕುರಿ ಕಳ್ಳನೊಬ್ಬನನ್ನು ಗ್ರಾಮಸ್ಥರೇ ಹಿಡಿದುಕೊಟ್ಟಿದ್ದರೂ, ಆತ ಪೊಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಠಾಣೆಯಿಂದ ಪರಾರಿಯಾಗಿರುವ ಘಟನೆ ನಂಜನಗೂಡಿನ ಉಪ ವಿಭಾಗದಲ್ಲಿ ನಡೆದಿದೆ.
ಘಟನೆ ವಿವರ :
ಕುರಿ ಕದಿಯುವುದನ್ನೇ ಚಾಳಿಮಾಡಿಕೊಂಡಿದ್ದ ತಾಲ್ಲೂಕಿನ ಅಳಗಂಚಿ ಗ್ರಾಮದ ಯುವಕನೊಬ್ಬ ತನ್ನ ಚಾಳಿಯನ್ನು ಮುಂದುವರೆಸಲು ಪಕ್ಕದ ಚಿನ್ನಂಬಳ್ಳಿ ಗ್ರಾಮಕ್ಕೆ ತೆರಳಿದ್ದಾನೆ.  ಅಲ್ಲಿ ಐನಾತಿ ಕುರಿಯೊಂದನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದಾಗ ಕುರಿಯ ಮಾಲಿಕ ಕಳ್ಳನನ್ನು ಹಿಡಿಯಲು ಯತ್ನಿಸುತ್ತಾನೆ. ಕುರಿಯ ಮಾಲಿಕ ತನ್ನನ್ನು ಹಿಡಿದು ಬಿಡುತ್ತಾನೆ ಎಂಬ ಆತಂಕದಲ್ಲಿ ಆ ಕಳ್ಳ ತನ್ನ ಬಳಿ ಇದ್ದ ಚಾಕುವಿನಿಂದ ಆತನಿಗೆ ಗಾಯಗೊಳಿಸಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ.

ಗಾಯಗೊಂಡ ಚಿನ್ನಂಬಳ್ಳಿ ಗ್ರಾಮದ ಕುರಿ ಮಾಲೀಕ ಜೋರಾಗಿ ಕಿರುಚಿಕೊಂಡಾಗ ಗ್ರಾಮದ ಹಾಗೂ ಅಕ್ಕ ಪಕ್ಕದ ಹಲವರು ಆ ಕಳ್ಳನನ್ನು ಕುರಿ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲಿಸರು ಆ ಕಳ್ಳನನ್ನು ವಶಕ್ಕೆ ಪಡೆದು ತೀವ್ರ ತನಿಖೆಗೆ ಒಳಪಡಿಸಿದಾಗ ಆತನಿಂದ ಮಹತ್ತರವಾದ ವಿಚಾರಗಳು ಬಂದಿವೆ ಎನ್ನಲಾಗಿದೆ. ಹೆಚ್ಚಿನ ತನಿಖೆಗಾಗಿ ಮತ್ತೋಂದು ಉನ್ನತ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸುತ್ತೀರುವ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin