ಪ್ರತಿಷ್ಠಿತ ಕಂಪೆನಿಯ ಲೋಗೋ ಬಳಸಿ ವಂಚಿಸುದ್ದಿಯವನ ಬಂಧನ, 4.71 ಲಕ್ಷ ರೂ. ಮಾಲು ವಶ

Crime--000001

ಬೆಂಗಳೂರು, ಜು.18- ಬ್ರ್ಯಾಂಡೆಡ್ ಅಲ್ಲದ ಬಟ್ಟೆಗಳಿಗೆ ಪ್ರತಿಷ್ಠಿತ ಕಂಪೆನಿಯ ಲೋಗೋ ಬಳಸಿ ಮಾರಾಟ ಮಾಡುತ್ತಿದ್ದ ವಂಚಕನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 4.71 ಲಕ್ಷ ರೂ. ಬೆಲೆ ಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮುಂಬೈನ ಮೊಹಮ್ಮದ್ ರಿಯಾಜ್ (35) ಬಂಧಿತ ವಂಚಕ.
ಬಾಣಸವಾಡಿ ಠಾಣಾ ವ್ಯಾಪ್ತಿಯ ನೆಹರೂ ಮುಖ್ಯ ರಸ್ತೆ, ಕಮ್ಮನಹಳ್ಳಿಯ ಅಂಗಡಿಯೊಂದರಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಪೂಮಾ, ಅಡಿದಾಸ್ ಮತ್ತು ನೈಕ್ ಕಂಪೆನಿಗಳ ಲೋಗೋ ಬಳಸಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದನು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಅಂಗಡಿ ಮೇಲೆ ದಾಳಿ 4.71 ಲಕ್ಷ ರೂ. ಬೆಲೆ ಬಾಳುವ 358 ಬಟ್ಟೆಗಳನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin