ಬೀಗ ಮೀಟಿ ಐಎಎಸ್ ಅಧಿಕಾರಿಯ ಮನೆಯಲ್ಲಿ ಕಳ್ಳತನ
ಬೆಂಗಳೂರು , ಜು.18- ಕಾರ್ಯನಿಮಿತ್ತ ಚನ್ನೈಗೆ ತೆರಳಿದ್ದ ಐಎಎಸ್ ಅಧಿಕಾರಿಯೊಬ್ಬರ ಮನೆಯ ಬೀಗ ಮೀಟಿ ಒಳನುಗ್ಗಿದ ಚೋರರು ಕಳ್ಳತನ ನಡೆಸಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್ಐಜಿ ಕಾಲೋನಿ, 12ನೇ ಕ್ರಾಸ್, 14ನೇ ಮುಖ್ಯರಸ್ತೆಯಲ್ಲಿ ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಅವರ ಮನೆಯಿದ್ದು, ಭಾನುವಾರ ಕುಟುಂಬದವರು ಚನ್ನೈಗೆ ತೆರಳಿದ್ದು ಇನ್ನೂ ವಾಪಸ್ ಆಗಿಲ್ಲ.
ಕಳ್ಳರು ಇವರ ಮನೆಯ ಬೀಗ ಮೀಟಿ ಒಳನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ನಿನ್ನೆ ಇವರ ಚಾಲಕ ಮನೆ ಬಳಿ ಬಂದಾಗ ಬಾಗಿಲು ಬೀಗ ಮೀಟಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸುಬೋಧ್ ಯಾದವ್ ಕುಟುಂಬ ಚನ್ನೈನಿಂದ ವಾಪಾಸ್ ಆದ ನಂತರವಷ್ಟೇ ಮನೆಯಲ್ಲಿ ಕಳುವಾಗಿರುವ ವಸ್ತುಗಳ ಬಗ್ಗೆ , ಅದರ ಮೌಲ್ಯದ ಬಗ್ಗೆ ತಿಳಿದು ಬರಲಿದೆ. ಈ ಸಂಬಂಧ ಸಂಜಯ್ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS