ಮುಂಬೈ ಏರ್ಪೋರ್ಟ್ ನಲ್ಲಿ ಲಷ್ಕರ್ ಭಯೋತ್ಪಾದಕನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

LRT-Terrorist--01

ಮುಂಬೈ, ಜು.18-ಸಿಆರ್‍ಪಿಎಫ್ ಶಿಬಿರದ ಮೇಲೆ ಆತ್ಮಾಹತ್ಯಾ ದಾಳಿ ನಡೆಸಲು ಕುಮ್ಮಕ್ಕು ನೀಡಿದ್ದ ಪಾಕಿಸ್ತಾನದ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‍ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ ಭಯೋತ್ಪಾದಕನೊಬ್ಬನನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಸಲೀಂ ಖಾನ್ ಅಲಿಯಾಸ್ ಖಾನ್ ಅಲಿಯಾಸ್ ಅಬು ಅಮರ್ ಅಲಿಯಾಸ್ ಆರೀಫ್ ಬಂಧಿತ ಲಷ್ಕರ್ ಉಗ್ರಗಾಮಿ. ಮೂಲತಃ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಹಾತ್‍ಗಾಂವ್‍ನ ಈತನನ್ನು ನಿನ್ನೆ ಮುಂಬೈನ ಛತ್ರಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಸಾ ಅವಧಿ ಮುಗಿದ ಕಾರಣ ಈತನನ್ನು ಯುಎಇಯಿಂದ ಅಟ್ಟಲಾಗಿತ್ತು. ಆನಂತರ ಈತನಿಗಾಗಿ ಲುಕ್‍ಔಟ್ ನೋಟಿಸ್ ಸಹ ನೀಡಲಾಗಿತ್ತು.  ತ್ತರಪ್ರದೇಶದ ರಾಮ್‍ಪುರ್‍ನಲ್ಲಿ ಜನವರಿ 1, 2008ರಲ್ಲಿ ಸಿಆರ್‍ಪಿಎಫ್ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಎಂಟು ಯೋಧರು ಹತರಾಗಿ, ಕೆಲವರು ಗಾಯಗೊಂಡಿದ್ದರು. ಈ ದಾಳಿಗೆ ಖಾನ್ ಕುಮ್ಮಕ್ಕು ನೀಡಿದ್ದ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin