ಮೋದಿ ಸ್ವಾಗತಕ್ಕೆ ಹೂಗುಚ್ಛ ಬದಲಿಗೆ ಪುಸ್ತಕ-ಖಾದಿ ಕರವಸ್ತ್ರ : ರಾಜ್ಯಗಳಿಗೆ ಸೂಚನೆ

Books--01

ನವದೆಹಲಿ, ಜು.18-ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನು ಮುಂದೆ ಹೂಗುಚ್ಛ ಬದಲು ಪುಸ್ತಕ ನೀಡಿ ಸ್ವಾಗತಿಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಕಳೆದ ಜೂ.17ರಂದು ಕೇರಳದ ಪಿ.ಎನ್.ಪಣಿಕರ್ ನ್ಯಾಷನಲ್ ರೀಡಿಂಗ್ ಡೇಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿಯವರು ಜನರು ಸ್ವಾಗತ ಕೋರಲು ಹೂಗುಚ್ಛ ಬದಲು ಪುಸ್ತಕ ನೀಡಿ ಎಂದು ಅವರೇ ಕೇಳಿಕೊಂಡಿದ್ದಾರೆ.

ಇದರಿಂದ ದೊಡ್ಡ ಬದಲಾವಣೆಯಾಗಲಿದೆ.   ಹೀಗಾಗಿ ದೇಶದ ಯಾವುದೇ ಭಾಗದಲ್ಲೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮೋದಿಯವರಿಗೆ ಪುಸ್ತಕ ಅಥವಾ ಖಾದಿ ಕರವಸ್ತ್ರ ನೀಡಿ ಸ್ವಾಗತಿಸಬಹುದು ಎಂದು ಹೇಳಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಕೂಡ ಹೂಗುಚ್ಛ ಬದಲಿಗೆ ಖಾದಿ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವಂತೆ ಹೇಳಿದ್ದರು. ಅದರಂತೆ ಈ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin