ರಷ್ಯಾದಲ್ಲಿ 7.8 ತೀವ್ರತೆಯ ಭಾರಿ ಭೂಕಂಪ, ಸುನಾಮಿ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

Earthqyake--01

ಮಾಸ್ಕೋ/ವಾಷಿಂಗ್ಟನ್, ಜು.18-ರಷ್ಯಾದ ಕಮಚಟ್ಕಾ ದ್ವೀಪಕಲ್ಪದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸುವ ಮುನ್ನೆಚ್ಚರಿಕೆ ನೀಡಲಾಗಿದೆ. ಸ್ಥಳೀಯ ಕಾಲಮಾನದಂತೆ ಮಂಗಳವಾರ ಬೆಳಗ್ಗೆ 11.34ಕ್ಕೆ ಭೂಕಂಪ ಸಂಭವಿಸಿದೆ. ಅಲಸ್ಕಾದ ಅಲ್ಯುಟಿಯಾನ್ ದ್ವೀಪದ ತುದಿ ಮತ್ತು ರಷ್ಯಾದ ಕಮಚಟ್ಕಾ ಪರ್ಯಾಯ ದ್ವೀಪದ ನಡುವೆ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಭೂಕಂಪವಾಗಿದೆ. ದ್ವೀಪಕಲ್ಪದ ಬಳಿ ನಿಕೋಲ್‍ಸ್ಕೋಯ್ ನಗರದಿಂದ 200 ಕಿ.ಮೀ.ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು.

ಭೂಕಂಪದಿಂದ ಸಾವು-ನೋವು ಸಂಭವಿಸಿದ ಬಗ್ಗೆ ತಕ್ಷಣಕ್ಕೆ ವರದಿಗಳಿಲ್ಲ.  ಭೂಕಂಪ ಕೇಂದ್ರ ಬಿಂದುವಿನಿಂದ 300 ಕಿ.ಮೀ. ವ್ಯಾಪ್ತಿಯ ಕರಾವಳಿ ಪ್ರದೇಶದಲ್ಲಿ ದೈತ್ಯಕಾರದ ಸುನಾಮಿ ಅಲೆಗಳು ಅಪ್ಪಳಿಸಬಹುದು ಎಂದು ಅಮೆರಿಕದ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಎಚ್ಚರಿಕೆ ನೀಡಿದೆ. ಪ್ರಬಲ ಭೂಕಂಪನದ ನಂತರ ಕಡಿಮೆ ತೀವ್ರತೆಯ ಹಲವಾರು ಪಶ್ಚಾತ್ ಕಂಪನಗಳು ಸಂಭವಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin