ರಾಜ್ಯಸಭೆಯಲ್ಲಿ ಆರ್ಭಟಿಸಿ ರಾಜೀನಾಮೆ ನೀಡಿದ ಮಾಯಾವತಿ

Mayavathi--01

ನವದೆಹಲಿ, ಜು.18- ಬಹುಜನ ಸಮಾಜಪಕ್ಷದ ಅಧಿನಾಯಕಿ ಮಾಯಾವತಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ರಾಜೀನಾಮೆಗೆ ಮುಂದಾದ ಪ್ರಸಂಗ ಇಂದು ನಡೆಯಿತು. ಸಂಸತ್ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪ ಇಂದು ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಅವಧಿಯಲ್ಲಿ ಮಾಯಾವತಿ ಉತ್ತರ ಪ್ರದೇಶದ ಸಹರನ್ಪುರ್ನಲ್ಲಿ ನಡೆದ ದಲಿತ ವಿರೋಧಿ ಹಿಂಸಾಚಾರ ವಿಷಯವನ್ನು ಪ್ರಸ್ತಾಪಿಸಿದರು.  ಆದರೆ, ಉಪಸಭಾಪತಿ ಪಿ.ಜೆ.ಕೊರಿಯನ್ ಈ ಕುರಿತು ಮೂರು ನಿಮಿಷಗಳ ಒಳಗೆ ಮಾತನಾಡಬೇಕೆಂದು ಸೂಚಿಸಿದ್ದು, ಮಾಯಾ ಅವರನ್ನು ಕೆರಳಿಸಿತು. ನಾನು ಈಗ ತಾನೇ ವಿಷಯ ಪ್ರಸ್ತಾಪಿಸುತ್ತಿದ್ದೇನೆ.

ಇದೊಂದು ಗಂಭೀರ ವಿಷಯ. ನನಗೆ ಮಾತನಾಡಲು ಸಮಯ ಬೇಕು. ದಲಿತ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಹಿಂಸಾಚಾರವನ್ನು ನೋಡಿಕೊಂಡು ಕುಳಿತುಕೊಳ್ಳಲು ಇಲ್ಲಿಗೆ ಬಂದಿಲ್ಲ. ಸಂಸದೆಯಾಗಿ ಮಾತನಾಡಲು ನನಗೆ ಹಕ್ಕು ಇದೆ ಎಂದು ಏರಿದ ಧ್ವನಿಯಲ್ಲಿ ಆರ್ಭಟಿಸಿದರು. ಜನರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಸಂಸದೆಯಾಗಿ ನನಗೆ ನೈತಿಕ ಹಕ್ಕು ಇಲ್ಲ ಎಂದ ಮೇಲೆ ನಾನು ಈ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ನಾನು ಈಗಲೇ ರಾಜೀನಾಮೆ ನೀಡುತ್ತೇನೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಯಾವತಿಯವರ ಆರ್ಭಟದಿಂದ ಸ್ವಲ್ಪ ವಿಚಲಿತರಾದಂತೆ ಕಂಡು ಬಂದ ಉಪಸಭಾಪತಿ ಕೊರಿಯನ್ ತಮ್ಮ ಆಸನದಿಂದ ಎದ್ದು ನಿಂತು ಮಾಯಾವತಿಯವರನ್ನು ಸಮಾಧಾನ ಪಡಿಸಲು ಯತ್ನಿಸಿದರು.   ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಮಾಯಾವತಿ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ, ಇವರು ಸದನಕ್ಕೆ ಬೆದರಿಕೆ ಹಾಕಿದ್ದಾರೆ. ಇದಕ್ಕಾಗಿ ಅವರು ಕ್ಷಮೆಕೋರಬೇಕು ಎಂದರು.  ಈ ಕುರಿತು ನಡೆದ ಚರ್ಚೆ ಬಳಿಕ ಮಾಯಾವತಿ ತಣ್ಣಗಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin