ರಾಜ್ಯಾದ್ಯಂತ ಡೆಂಘೀ ಡಂಗೂರ, ನೀವು ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Degue--01

ಬೆಂಗಳೂರು/ಮೈಸೂರು/ತುಮಕೂರು, ಜು.18- ಮಳೆಯ ಅಭಾವ, ಆವರಿಸುತ್ತಿರುವ ಭೀಕರ ಬರದ ಛಾಯೆಗಳ ನಡುವೆಯೇ ರಾಜ್ಯದ ಹಲವೆಡೆ ಡೆಂಘೀ ಮತ್ತು ಮಲೇರಿಯಾ ರೋಗಗಳೂ ದಾಳಿ ನಡೆಸಿದ್ದು ಜನತೆ ತತ್ತರಿಸಿ ಹೋಗಿದ್ದಾರೆ. ವಿಶೇಷವಾಗಿ ಮಕ್ಕಳಲ್ಲೇ ಈ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪೋಷಕರು ತೀವ್ರ ಆತಂಕದಲ್ಲಿದ್ದಾರೆ.   ಅತ್ತ ಸರ್ಕಾರಗಳೂ ಕೂಡ ಈ ಮಹಾ ಮಾರಿಗಳ ತಡೆಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ, ಅವು ನಿಯಂತ್ರಣಕ್ಕೆ ಬಾರದಿರುವುದು ಜನ ಇನ್ನಷ್ಟೂ ಕಳವಳಕ್ಕೊಳಗಾಗುವಂತೆ ಮಾಡಿದೆ.

ರಾಜ್ಯಧಾನಿ ಬೆಂಗಳೂರು, ಸಾಂಸ್ಕøತಿಕ ನಗರಿ ಮೈಸೂರು ಹಾಗೂ ತುಮಕೂರು ಮತ್ತಿತರ ಕೆಲವು ಜಿಲ್ಲೆಗಳಲ್ಲಿ ಡೆಂಘೀ ಮತ್ತು ಮಲೇರಿಯಾಗಳು ತಮ್ಮ ವಿಕಟಾಟ್ಟಾಸ ಮೇರೆದಿವೆ. ಇಂದು ಕೂಡ ತುಮಕೂರು ಜಿಲ್ಲೆ ಪಾವಗಡದಲ್ಲಿ ಪುಟ್ಟ ಮಗುವೊಂದು ಡೆಂಘೀಗೆ ಬಲಿಯಾಗಿದೆ.   ರಾಜ್ಯದ ವಿವಿಧೆಡೆ ಕಳೆದ ಹತ್ತಿಪ್ಪತ್ತು ದಿನಗಳಿಂದ ಸುಮಾರು 15ಕ್ಕೂ ಹೆಚ್ಚು ಜನರು ಡೆಂಘೀಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಡೆಂಘೀ ಹಾವಳಿಯಾದರೆ ಇನ್ನೊಂದೆಡೆ ಮಲೇರಿಯಾ ಕೂಡ ಅಷ್ಟೇ ವೇಗದಲ್ಲಿ ವ್ಯಾಪಿಸಿ ಜನರ ನಿದ್ದೆಗೆಡಿಸಿದೆ.

ಇದುವರೆಗೆ ತುಮಕೂರು ಜಿಲ್ಲಾ ಕೇಂದ್ರದಲ್ಲಿ 3 ಜನ, ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಪಾವಗಡ ತಾಲೂಕಿನಲ್ಲಿ ತಲಾ ಇಬ್ಬರು, ತಿಪಟೂರು ಮತ್ತು ತುರುವೆಕೆರೆಗಳಲ್ಲಿ ತಲಾ ಒಬ್ಬರು ಸೇರಿ ಒಟ್ಟು ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಬಹುತೇಕ ಮಕ್ಕಳೆ ಎಂಬುದು ವಿಶೇಷ. ರಾಜ್ಯಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲೂ ಡೆಂಘೀ ಮತ್ತು ಮಲೇರಿಯಾ ವಿಜೃಂಬಿಸಿವೆ. ಅದೇ ರೀತಿ ಮೈಸೂರು ಜಿಲ್ಲೆಯಲ್ಲೂ ಡೆಂಘೀ ತನ್ನ ಹಾವಳಿ ಮುಂದುವರೆಸಿದೆ.

ಬಾಲಕ ಸಾವು:

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹಳ್ಳಿಯ ವೆಂಕಟಸ್ವಾಮಿ ಮತ್ತು ಸುಗುಣಮ್ಮ ದಂಪತಿಯ ಮಗ ಶ್ರೀನಿಧಿ ಎಂಬ ಬಾಲಕ ಜ್ವರದಿಂದ ಬಳಲುತ್ತಿದ್ದು, ಅವನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಕಲಿಸಲಾಗಿತ್ತು. ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ವಿವಿಧ ಆಸ್ಪತ್ರಗಳಲ್ಲಿ ದಾಖಲಾಗಿರುವ ಹಲವು ರೋಗಿಗಳಲ್ಲಿ ಡೆಂಘೀ ಮತ್ತು ವಿಷಮಶೀತ ಜ್ವರ ಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಭೀತಿ ಕಾಡುತ್ತಿದೆ.
ಆರೋಗ್ಯ ಇಲಾಖೆ ಇನ್ನಾದರೂ ಎಚ್ಚೆತ್ತು ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯ ಸಚಿವರು ಕೂಡ ಈ ಬಗ್ಗೆ ಗಮನ ಹರಿಸಿ ಜಿಲ್ಲೆಯ ಆರೋಗ್ಯಾಧಿಕಾರಿಗಳಿಗೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಬೇಕು.

ಕೆಲವು ಕಡೆ ಸರ್ಕಾರದ 108 ಆಂಬ್ಯುಲೆನ್ಸ್‍ಗಳು ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಅದು ಕೂಡ ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಸಚಿವರು ಈ ಕುರಿತಂತೆಯೂ ನಿಗಾವಹಿಸಿ ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin