ರುದ್ರಾಕ್ಷಿ ಏಕೆ ಧರಿಸಬೇಕು..? ಮಹತ್ವ ಗೊತ್ತೇ ..?

Rudrakshi--01

ರುದ್ರಾಕ್ಷಿ ಪದ ಕೇಳಿದಾಕ್ಷಣ ಧಾರ್ಮಿಕವಾದಿಗಳಿಗೆ ಏನೋ ಒಂದು ರೀತಿ ಸಂಚಲನ ಉಂಟಾಗುತ್ತದೆ. ಭಕ್ತಿ-ಭಾವ ಮೂಡುತ್ತದೆ. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷ ಸ್ಥಾನವಿದೆ. ಒಂದೊಂದು ರುದ್ರಾಕ್ಷಿ ಒಂದೊಂದು ಪ್ರತ್ಯೇಕ ಗುಣವನ್ನು ಹೊಂದಿರುತ್ತದೆ. ಅದೇ ರೀತಿ ಅದರ ಪ್ರತಿಫಲವೂ ಕೂಡ ಬೇರೆ ಬೇರೆ ರೀತಿಯಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಶರಣರು, ಧಾರ್ಮಿಕ ವಾದಿಗಳಂತು ರುದ್ರಾಕ್ಷಿಯನ್ನು ಸಾಕ್ಷಾತ್ ಭಗವಂತನ ಸಂಕೇತವೆಂದೇ ಪೂಜಿಸುತ್ತಾರೆ. ಅಂತಹ ರುದ್ರಾಕ್ಷಿ ಮಹಿಮೆಗೆ ಸಂಬಂಧಿಸಿದಂತೆ ಯಾವ ಯಾವ ರುದ್ರಾಕ್ಷಿ ಏನನ್ನು ಹೇಳುತ್ತದೆ. ಅದರ ಫಲವೇನು ಎಂಬುದರ ಬಗ್ಗೆ ಶಾಂತಿ ಪ್ರವೀಣ್‍ರಾವ್ ಸವಿವರವಾಗಿ ವಿವರಿಸಿದ್ದಾರೆ.

ಒಂದು ಮುಖ ರುದ್ರಾಕ್ಷ:

ಒಂದು ಮುಖ ರುದ್ರಾಕ್ಷ ನಿಮ್ಮಲ್ಲಿರುವ ದಿವ್ಯ ಜ್ಞಾನವನ್ನು ಬೆಳೆಗಿಸುತ್ತದೆ. ಇದು ಪರಶಿವನ ಆತ್ಮಸ್ವರೂಪವಾಗಿದೆ. ಇದು ಕಾಮಧೇನುವಿನಂತೆ ಮಹಿಮಾನ್ವಿತವಾಗಿದೆ. ಇದನ್ನು ಏಕಮುಖ ರುದ್ರಾಕ್ಷ ಎಂದು ಕರೆಯುವರು. ಇದು ಅರ್ಧ ಚಂದ್ರಾಕೃತಿಯಲ್ಲಿರುತ್ತದೆ. ಒಂದು ಮುಖಿ ರುದ್ರಾಕ್ಷ ಸರ್ವಶ್ರೇಷ್ಠ ಭಗವಂತನ ಸಂಕೇತವಾಗಿದೆ. ಇದು ನಿಮಗೆ ಯಾವುದೇ ವಸ್ತುವಿನ ಮೇಲೆ ಏಕಾಗ್ರತೆಯನ್ನು ತರಲು ನೆರೆವಾಗುತ್ತದೆ. ಯಶಸ್ಸನ್ನು ಗಳಿಸುವುದಕ್ಕಾಗಿ ಮತ್ತು ವಿಶೇಷ ಗಮನ ಹರಿಸುವ ಶಕ್ತಿ ಪಡೆಯಲು ಇದನ್ನು ಉಪಯೋಗಿಸಬಹುದಾಗಿದೆ.
ಬೀಜ ಮಂತ್ರ : ಓಂ ಹ್ರೀಂ ನಮಃ
ಎರಡು ಮುಖ ರುದ್ರಾಕ್ಷ:

ಇದು ಭಗವಂತನಾದ ಶಿವ ಮತ್ತು ದೇವಿ ಪಾರ್ವತಿಯ ಸಮ್ಮಿಳಿತ ಚಿತ್ರಣವಾಗಿದೆ ಮತ್ತು ಅರ್ಧ ನಾರೀಶ್ವರನ ಸಂಕೇತವಾಗಿದೆ. ಇದನ್ನು ಧರಿಸುವವನಿಗೆ ಒಗ್ಗಟ್ಟು ಶಕ್ತಿ ಸಿಗುತ್ತದೆ. ಗುರು-ಶಿಷ್ಯ ತಂದೆ- ತಾಯಿ ಮಕ್ಕಳು, ಪತಿ- ಪತ್ನಿ ಅಥವಾ ಸ್ನೇಹಿತರ ನಡುವಿನ ಸಂಬಂಧವಾಗಿರಬಹುದು. ಅವರನ್ನು ಒಂದಾಗಿರಿಸುವುದೇ ಇದರ ವೈಶಿಷ್ಟ್ಯವಾಗಿದೆ. ಚಂದ್ರ ಇದರ ಅಧಿಪತಿ. ಇದನ್ನು ಓಂ ಶ್ರೀ ಅರ್ಧನಾರಿಶ್ವರಾಯ ನಮಃ ಎಂಬ ಮಂತ್ರ ಜಪಿಸಿ ಭಕ್ತಿಯಿಂದ ಧರಿಸಬೇಕು. ಇದರಿಂದ ಸತ್ಸಂಕಲ್ಪಗಳು ಸಾಕಾರಗೊಳ್ಳುತ್ತವೆ.
ಬೀಜ ಮಂತ್ರ : ಓಂ ನಮಃ

ಮೂರು ಮುಖ ರುದ್ರಾಕ್ಷ:

ಈ ರುದ್ರಾಕ್ಷ ಸಾಕ್ಷಾತ್ ಅಗ್ನಿಯನ್ನು ಪ್ರತಿನಿಧಿಸುತ್ತದೆ. ಅಗ್ನಿ ಎಲ್ಲವನ್ನೂ ಸುಟ್ಟು ಹಾಕುತ್ತದೆ ಮತ್ತು ಪರಿಶುದ್ಧಗೊಳಿಸುತ್ತದೆ. ಆದ್ದರಿಂದ ಪಾಪ- ದೋಷಗಳ ನಾಶಕವಾಗಿದ್ದು, ಸತ್ಕಾರ್ಯಗಳೆಡೆಗೆ ಪ್ರೇರೇಪಣೆ ನೀಡುತ್ತದೆ. ಸಕಲ ವಿದ್ಯೆಗಳನ್ನೂ ಪ್ರಾಪ್ತಿಸುತ್ತದೆ. ಸಂಕುಚಿತ ಮನೋಭಾವಗಳಿಂದ ನರಳುತ್ತಿರುವವರಿಗೆ ಯಾವುದೇ ವಿಷ ಭಯ, ಅಪರಾಧಿ ಭಾವ, ನ್ಯೂನತೆ, ದೌರ್ಬಲ್ಯ ಉಳ್ಳವರಿಗೆ ಇದು ಸೂಕ್ತವಾಗಿದೆ. ಮಂಗಳ ಇದರ ಅಧಿಪತಿ. ಓಂ ಅಗ್ನಿದೇವಾಯ ನಮಃ ಎಂಬ ಮಂತ್ರ ಪಠಿಸಿ ಧರಿಸಬೇಕು.
ಬೀಜ ಮಂತ್ರ : ಓಂ ಕ್ಲೀಂ ನಮಃ

ನಾಲ್ಕು ಮುಖ ರುದ್ರಾಕ್ಷ:

ಈ ರುದ್ರಾಕ್ಷ ಭಗವಂತನಾದ ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಇದನ್ನು ಧರಿಸಿದಾತನಿಗೆ ಕ್ರಿಯಾಶೀಲತೆಯ ಫಲ ಲಭಿಸುತ್ತದೆ. ವಿದ್ಯಾರ್ಥಿಗಳು, ವಿಜ್ಞಾನಿಗಳು, ಸಂಶೋಧಕರು, ವಿದ್ವಾಂಸರು, ಕಲಾವಿದರು, ಲೇಖಕರು ಮೊದಲಾದವರಿಗೆ ಇದು ಅತ್ಯಂತ ಸೂಕ್ತವಾದುದಾಗಿದೆ. ಸ್ಮರಣ ಶಕ್ತಿ, ವಿವೇಕ ಮತ್ತು ಬುದ್ಧಿಶಕ್ತಿಯನ್ನು ವರ್ಧಿಸುತ್ತದೆ. ಆರೋಗ್ಯ, ಜ್ಞಾನ ವೃದ್ಧಿಸುತ್ತದೆ. ಓಂ ಬ್ರಹ್ಮದೇವಾಯ ನಮಃ ಎಂಬ ಮಂತ್ರ ಹೇಳಿ ಇದನ್ನು ಧರಿಸಬೇಕು.
ಬೀಜ ಮಂತ್ರ : ಓಂ ಹ್ರೀಂ ನಮಃ

ಐದು ಮುಖ ರುದ್ರಾಕ್ಷ:

ಇದು ಭಗವಂತನಾದ ಶಿವನ ಮಂಗಳಕರ ಸ್ವರೂಪವಾದ ಕಾಲಾಗ್ನಿ ರುದ್ರರೂಪವನ್ನು ಪ್ರತಿನಿಧಿಸುತ್ತದೆ. ಐದು ಮುಖಿ ರುದ್ರಾಕ್ಷ ಧರಿಸುವವನಿಗೆ ಆರೋಗ್ಯ ಮತ್ತು ಶಾಂತಿ ಪ್ರಾಪ್ತವಾಗುತ್ತದೆ. ರಕ್ತದ ಒತ್ತಡ ಮತ್ತು ಹೃದಯದ ವ್ಯಾಧಿಗಳನ್ನು ನೇರ್ಪುಗೊಳಿಸುವಲ್ಲಿ ಐದು ಮುಖಿ ರುದ್ರಾಕ್ಷವು ನೆರೆವಾಗುತ್ತದೆ. ಇದನ್ನು ಜಪದ ಸಲುವಾಗಿಯೂ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಸರ್ವ ಕಾಮನೆಗಳೂ ಸಾಕಾರವಾಗುತ್ತವೆ. ಜೊತೆಗೆ ಮೋಕ್ಷಪ್ರದ.
ಬೀಜ ಮಂತ್ರ : ಓಂ ಹ್ರೀಂ ಹಂ ನಮಃ

ಆರು ಮುಖ ರುದ್ರಾಕ್ಷ:

ಈ ರುದ್ರಾಕ್ಷ ಭಗವಾನ್ ಕಾರ್ತಿಕೇಯ ಅಥವಾ ಷಣ್ಮುಖನನ್ನು ಪ್ರತಿನಿಧಿಸುತ್ತದೆ. ಲೌಕಿಕ ದುಃಖ-ಸಂಕಷ್ಟಗಳಿಂದಾಗಿ ಉಂಟಾಗುವ ಭಾವನಾತ್ಮಕ ನೋವುಗಳಿಂದ ನಿಮ್ಮನ್ನು ಪಾರು ಮಾಡುತ್ತದೆ. ಹಾಗೂ ಕಲಿಕೆ, ಜ್ಞಾನ ಮತ್ತು ಬುದ್ಧಿಶಕ್ತಿಯನ್ನು ಅನುಗ್ರಹಿಸುತ್ತದೆ. ಪ್ರೇಮವನ್ನು ಪ್ರೀತಿಯನ್ನು ಅರಿಯುವ ಶಕ್ತಿ ನೀಡುತ್ತದೆ. ಜ್ಞಾನ ಮತ್ತು ಬುದ್ಧಿಶಕ್ತಿಯನ್ನು ಕರುಣಿಸುತ್ತದೆ. ಶುಕ್ರ ಇದರ ಅಧಿಪತಿ ಗ್ರಹ. ಶ್ರೀ ವಿನಾಯಕನು ಈ ರುದ್ರಾಕ್ಷಿಯ ಅಧಿ ದೇವನೆನ್ನಲಾಗುತ್ತದೆ. ಈ ರುದ್ರಾಕ್ಷದ ಧಾರೆಣೆಯಿಂದ ಮನಃಶುದ್ದಿ, ಅಂತಃಕರಣ ಪರಿವರ್ತನೆ ಕೈಗೂಡುವುದು.
ಬೀಜ ಮಂತ್ರ : ಓಂ ಹ್ರೀಂ ಹಂ ನಮಃ

ಏಳು ಮುಖ ರುದ್ರಾಕ್ಷ:

ಈ ರುದ್ರಾಕ್ಷದೇವಿ ಮಹಾಲಕ್ಷ್ಮಿಯನ್ನು ಪ್ರತಿನಿಧಿಸುತ್ತದೆ. ಈ ರುದ್ರಾಕ್ಷವನ್ನು ಧರಿಸುವವರಿಗೆ ದೇವಿ ಮಹಾಲಕ್ಷ್ಮೀ ಉತ್ತಮ ಆರೋಗ್ಯವನ್ನು ಕರುಣಿಸುತ್ತಾಳೆ. ಶರೀರದ ನ್ಯೂನತೆಗಳು, ಹಣಕಾಸು ತೊಂದರೆಗಳು ಮತ್ತು ಮಾನಸಿಕ ಚಿಂತೆಗಳಲ್ಲಿರುವವರು ಇದನ್ನು ಧರಿಸಬಹುದಾಗಿದೆ. ಏಳು ಮುಖಗಳ ರುದ್ರಾಕ್ಷವನ್ನು ಧರಿಸುವ ಮೂಲಕ ವ್ಯಕ್ತಿ ತನ್ನ ವ್ಯಾಪಾರ ಮತ್ತು ವೃತ್ತಿಯಲ್ಲಿ ಏರುಮುಖ ಪ್ರಗತಿಯನ್ನು ಸಾಧಿಸುತ್ತಾ ಸುಖವಾಗಿ ಬಾಳಬಹುದಾಗಿದೆ. ಶನಿ ಇದರ ಅಧಿಪತಿ ಗ್ರಹವಾಗಿದೆ. ಈ ರುದ್ರಾಕ್ಷವು ಧರಿಸುವವನಿಗೆ ಸಂತೋಷ ಅನುಗ್ರಹಿಸಿ ಕೊಡುತ್ತದೆ. ಹಾಗೂ ಲೌಕಿಕ ಲಾಭಗಳ ಹೆಚ್ಚಳಕ್ಕಾಗಿ ಇದನ್ನು ಸಾಮಾನ್ಯವಾಗಿ 8 ಮುಖ ಅಥವಾ ಗಣೇಶ ರುದ್ರಾಕ್ಷದೊಂದಿಗೆ ಧರಿಸಲಾಗುತ್ತದೆ. ಇದು ಸಪ್ತಮಾತೃಕಾ ಶಕ್ತಿಗಳ ಪ್ರತಿರೂಪ.
ಬೀಜ ಮಂತ್ರ : ಓಂ ಹಂ ನಮಃ

ಎಂಟು ಮುಖ ರುದ್ರಾಕ್ಷ:

ಈ ರುದ್ರಕ್ಷಿ ವಿಘ್ನ ವಿನಾಯಕ, ಭೈರವಾತ್ಮಕ ಗಣೇಶನನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ಸಕಲ ತೊಂದರೆಗಳನ್ನು ಹೋಗಲಾಡಿಸುತ್ತದೆ ಮತ್ತು ನೀವು ಮಾಡುವ ಕಾರ್ಯಗಳಿಗೆಲ್ಲಾ ಸಫಲತೆ ತಂದುಕೊಡುತ್ತದೆ. ಇದನ್ನು ಧರಿಸುವವರಿಗೆ ಎಲ್ಲಾ ರೀತಿ ಸಿದ್ಧಿಗಳು ಪ್ರಾಪ್ತವಾಗುತ್ತವೆ. ಇದನ್ನು ಧರಿಸಿದಾತನ ವಿರೋಧಿಯ ಇಚ್ಛೆ ಮತ್ತು ಮನಸ್ಸುಗಳು ಪರಿವರ್ತನೆಗೊಳ್ಳುತ್ತವೆ. ಇದರ ಅಧಿಪತಿ ರಾಹು (ಡ್ರಾಗನ್‍ನ ಶಿರ.) ಇದನ್ನು ಓಂ ಶ್ರೀ ಅಷ್ಟಾವಸು ಗಣಪತಿ ಗಂಗಾದೇವ್ಯೈ ನಮಃ ಎಂದು ಜಪಿಸಿ ಧರಿಸಬೇಕು.
ಬೀಜ ಮಂತ್ರ : ಓಂ ಹಂ ನಮಃ
ಒಂಬತ್ತು ಮುಖ ರುದ್ರಾಕ್ಷ:

ಈ ರುದ್ರಾಕ್ಷ ದುರ್ಗಾ ದೇವತೆ (ಶಕ್ತಿ)ಯನ್ನು ಪ್ರತಿನಿಧಿಸುತ್ತದೆ. ಇದನ್ನು ಧರಿಸಿದಾಗ ದೇವಿ ನಿಮಗೆ ಒಲಿಯುತ್ತಾಳೆ ಹಾಗೂ ಜೀವನದ ಸಫಲತೆಗೆ ಅಗತ್ಯವಾಗಿರುವ ಸಾಕಷ್ಟು ಶಕ್ತಿ ಸಾಮಥ್ರ್ಯ, ಚುರುಕುತನ ಮತ್ತು ನಿರ್ಭಯತೆಯನ್ನು ದಯಪಾಲಿಸುತ್ತಾಳೆ. ಇದರ ಅಧಿಪತಿ ಕೇತು (ಡ್ರಾಗನ್‍ನ ಬಾಲ ) ಗ್ರಹ ಇದನ್ನು ಎಡ ಕೈಗೆ ಧರಿಸಬಹುದಾಗಿದೆ. ಓಂ ನವಶಕ್ತಿ ದೇವತಾಯೈ ನಮಃ ಎಂದು ಜಪಿಸಿ ಇದನ್ನು ಧರಿಸಬೇಕು.

Facebook Comments

Sri Raghav

Admin