ವಿಷಪೂರಿತ ಮೇವು ಸೇವಿಸಿ ಜಾನುವಾರುಗಳ ಸಾವು

ಚಿಕ್ಕಮಗಳೂರು, ಜು.18- ಕಡೂರು ತಾಲ್ಲೂಕಿನ ಸಣ್ಣಗೌಡನ ಕೊಪ್ಪಲಿನಲ್ಲಿ ರಾಜಪ್ಪ ಮತ್ತು ರಮೇಶ್ ಎಂಬ ರೈತರಿಗೆ ಸೇರಿದ ನಾಲ್ಕು ಜಾನುವಾರುಗಳು ವಿಷಪೂರಿತ ಮೇವು ಸೇವಿಸಿ ಸಾವನ್ನಪ್ಪಿವೆ. ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಿಕೊಂಡು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು. ರಾತ್ರಿ 7.30ರ ಸುಮಾರಿನಲ್ಲಿ ನೀರು ಮತ್ತು ಮುಸುರೆ ಕುಡಿಸಲಾಗಿತ್ತು. ಸ್ವಲ್ಪ ಸಮಯದ ನಂತರ ಬಂದು ನೋಡಿದಾಗ ಒಂದು ಎಮ್ಮೆ. ಒಂದು ಹಸು ಹಾಗೂ ಎರಡು ಕರು ಮೃತಪಟ್ಟಿದ್ದವು. ಕೂಡಲೇ ಪಶುವೈದ್ಯ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.

ವಾರದ ಹಿಂದೆ ಗಬ್ಬದ ಎಮ್ಮೆ ಇದೇ ರೀತಿ ಮೃತಪಟ್ಟಿತ್ತು ಎಂದು ಇದೇ ಕುಟುಂಬದ ಗೀತಾ ಎಂಬುವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಾನುವಾರುಗಳು ದಿಢೀರನೆ ಈ ರೀತಿ ಸಾವನ್ನಪ್ಪುತ್ತಿರುವುದರಿಂದ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಪಶುವೈದ್ಯರ ತಂಡ ಹಳ್ಳಿಗೆ ಭೇಟಿ ನೀಡಿ ಸತ್ತಿರುವ ಜಾನುವಾರುಗಳ ಅಂಗಾಂಗ ಪರೀಕ್ಷಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin