ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Crime--00012554

ಬೆಂಗಳೂರು, ಜು.18- ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ, ಬ್ರಿಟನ್ ಹಾಗೂ ಮೊಜಾಂಬಿಕ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ನೈಜೀರಿಯಾದ ಆ್ಯಂಟೋನಿ ಎಗ್ವೋಬಾ, ಬ್ರಿಟನ್ನ ಓವೆನ್ ಪೆನ್ಹಾಲಿಜನ್ ಮತ್ತು ಮೊಜಾಂಬಿಕಾದ ಸೆರೆಲ್ ಮ್ಯಾನ್ಯುಯಲ್ (28) ಬಂಧಿತರು.
ಆರೋಪಿಗಳಿಂದ 7.50 ಲಕ್ಷ ರೂ. ಮೌಲ್ಯದ ಕೊಕೈನ್, 7 ಮೊಬೈಲ್ಗಳು, ಐ-ಪಾಡ್, 2 ಪಾಸ್ಪೋರ್ಟ್ , ಕಾರು, ದ್ವಿಚಕ್ರ ವಾಹನ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ವೀಸಾ ನಿಯಮ ಉಲ್ಲಂಘಿಸಿ ಸುಳ್ಳು ದಾಖಲಾತಿಗಳನ್ನು ಬಳಸಿ ಅನ್ಯ ವ್ಯಕ್ತಿಯ ಹೆಸರಿನಲ್ಲಿ ಪಡೆದ ಸಿಮ್ಕಾರ್ಡ್ಗಳನ್ನು ತಮ್ಮ ಅನಧಿಕೃತ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಸುತ್ತ ಮಾದಕ ವಸ್ತು ಮಾರಾಟ ಮಾಡಿ ಅಕ್ರಮ ಲಾಭ ಗಳಿಸುತ್ತಿದ್ದುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಯ್ಯಪ್ಪನಹಳ್ಳಿ ವ್ಯಾಪ್ತಿಯ ಎನ್ಜಿಇಎಫ್ ಲೇಔಟ್ನ ಸದಾನಂದನಗರದ ಮುಖ್ಯರಸ್ತೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಈ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin